ಸುಳ್ಯ:ಗುತ್ತಿಗಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಜಯಪ್ರಕಾಶ್ ಮೊಗ್ರ ಹಾಗೂ ಉಪಾಧ್ಯಕ್ಷರಾಗಿ ಕೃಷ್ಣಯ್ಯ ಮೂಲೆತೋಟ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಎಲ್ಲಾ 12 ಸ್ಥಾನಗಳನ್ನು ಪಡೆದು ಅಧಿಕಾರದ ಚುಕ್ಕಾಣಿ ಹಿಡಿದಿತ್ತು.ಇಂದು ನಡೆದ
ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಜಯಪ್ರಕಾಶ್ ಮೊಗ್ರ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಕೃಷ್ಣಯ್ಯ ಮೂಲೆತೋಟ ಮಾತ್ರ ನಾಮಪತ್ರ ಸಲ್ಲಿಸಿದ್ದ ಕಾರಣ ಅವಿರೋಧ ಆಯ್ಕೆ ನಡೆಯಿತು.
ನಿರ್ದೇಶಕರಾದ ವೆಂಕಟ್ ದಂಬೆಕೋಡಿ, ಮುಳಿಯ ಕೇಶವ ಭಟ್,ನವೀನ್ ಬಾಳುಗೋಡು, ರವೀಂದ್ರ ಕಾನಾವು ಅಡ್ಡನಪಾರೆ, ಪದ್ಮನಾಭ ಮೀನಾಜೆ, ವಿನ್ಯಾಸ್ ಕೊಚ್ಚಿ, ತಿಲಕ ಕೋಲ್ಯ, ವಿನುತಾ ಜಾಕೆ, ಜನಾರ್ದನ ನಾಯ್ಕ ಅಚ್ರಪ್ಪಾಡಿ, ಕುಂಞ ಬಳ್ಳಕ್ಕ ಭಾಗವಹಿಸಿದ್ದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಬೆಳ್ಯಪ್ಪ ಗೌಡ, ರಾಕೇಶ್ ಮೆಟ್ಟಿನಡ್ಕ ಮತ್ತಿತರರು ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಅಭಿನಂದಿಸಿದರು.