ಸುಳ್ಯ:ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ ರಚನೆ ಬೆನ್ನಲ್ಲೆ ಗಾಣಿಗ ಅಭಿವೃದ್ಧಿ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರು ಸುಳ್ಯ ಪಾಟಾಳಿಯಾನೆ ಗಾಣಿಗ ಸಮಾಜ ಸೇವಾ ಸಂಘದ ಕಛೇರಿಗೆ ಭೇಟಿ ನೀಡಿದರು.
ಗಾಣಿಗ ಅಭಿವೃದ್ದಿ ಸಂಘದ ಅಧ್ಯಕ್ಷ ರಾಜಶೇಖರ್, ಉಪಾಧ್ಯಕ್ಷ ರಂಗರಾಜು ಅವರಿಗೆ
ಸುಳ್ಯ ಪಾಟಾಳಿ ಗಾಣಿಗ ಸಮುದಾಯದ ವತಿಯಿಂದ ಸನ್ಮಾನಿಸಿ ವಿವಿಧ ಬೇಡಿಕೆಗಳ ಬಗ್ಗೆ ಸುಳ್ಯ ಸಮಿತಿ ಪಧಾಧಿಕಾರಿಗಳು ಮಾಹಿತಿ ನೀಡಿ, ಸರಕಾರಿ ಸೌಲಭ್ಯಗಳನ್ನು ಕಲ್ಪಿಸಿ ಕೊಡುವಂತೆ ವಿನಂತಿಸಿದರು. ಅಲ್ಲದೇ ಪುತ್ತೂರಿನಲ್ಲಿ ಪೆರ್ಣೆ ಶ್ರೀ ಮುಚ್ಚಿಲೋಟ್ ಭಗವತಿ ಕ್ಷೇತ್ರದ ವ್ಯಾಪ್ತಿಗೆ ಒಳಪಟ್ಟ ಪಾಟಾಳಿ ಗಾಣಿಗ ಸಮಾಜದ ಕ್ರಿಕೆಟ್ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದ ಸುಳ್ಯದ ನ್ಹಾಯವಾದಿ ಚಂದ್ರಶೇಖರ ಉದ್ದಂತಡ್ಕ ಮಾಲಕತ್ವದ ಪಾಟಾಳಿ ಪ್ಯಾಂಥರ್ಸ್ ತಂಡಕ್ಕೆ ಅಭಿನಂದನೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ವೆಂಕಟ್ರಮಣ ಬೇರ್ಪಡ್ಕ. ಚಂದ್ರಶೇಖರ ಉದ್ದಂತಡ್ಕ , ಮಹಾಲಿಂಗ ಭಾಜರತೊಟ್ಟಿ , ಸಂಜಯ್ ನೆಟ್ಟಾರು ಸೇರಿದಂತೆ ಮತ್ತಿತರ ಪಧಾಧಿಕಾರಿಗಳು ಉಪಸ್ಥಿತರಿದ್ದರು.















