ಸುಳ್ಯ:ಸುಳ್ಯ ಗಾಂಧಿನಗರ ಕೇಂದ್ರ ಜುಮ್ಮಾ ಮಸ್ಜಿದ್ನಲ್ಲಿ ಮುಸ್ಲಿಂ ಬಾಂಧವರು ಪವಿತ್ರ ಹಜ್ ಪ್ರತೀಕವಾಗಿ ತ್ಯಾಗ, ಸಮರ್ಪಣೆಯ ಪ್ರತೀಕವಾದ ಈದುಲ್ಅಝ್ಹಾ ( ಬಕ್ರೀದ್ ) ಹಬ್ಬವನ್ನು ಆಚರಿಸಲಾಯಿತು. ನೂರಾರು ಭಕ್ತಾಧಿಗಳು ಸಂಗಮಿಸಿ
ಈದ್ ನಮಾಜ್ ಮಾಡಿದರು. ಕುತುಬಾ ಪಾರಾಯಣ, ಪರಸ್ಪರ ಆಲಿಂಗನ ಶುಭಾಶಯ ವಿನಿಮಯ ಬಂಧು ಮಿತ್ರಾದಿಗಳ ಭೇಟಿಯೊಂದಿಗೆ ಹಬ್ಬ ಆಚರಿಸಲಾಯಿತು. ಖತೀಬರಾದ ರಫೀಕ್ ಸಹದಿ ಕಂಬಳಬೆಟ್ಟು ಸಂದೇಶ ನೀಡಿದರು.
ಸುಳ್ಯ ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಕೆ. ಎಂ. ಮುಸ್ತಫ, ಜುಮಾ ಮಸ್ಜಿದ್ ಅಧ್ಯಕ್ಷ ಹಾಜಿ ಕೆಎಂಎಸ್ ಮಹಮ್ಮದ್, ಉಪಾಧ್ಯಕ್ಷ ಬೀಜಕೊಚ್ಚಿ, ನಗರ ಪಂಚಾಯತ್ ಸದಸ್ಯರಾದ ಕೆ. ಎಸ್. ಉಮ್ಮರ್, ಶರೀಫ್ ಕಂಠಿ, ರಿಯಾಜ್ ಕಟ್ಟೆಕ್ಕಾರ್ಸ್, ಸಿದ್ದೀಕ್ ಕೊಕ್ಕೋ, ಆಡಳಿತ ಸಮಿತಿ ಸದಸ್ಯರಾದ ಕೆ.ಬಿ.ಅಬ್ದುಲ್ ಮಜೀದ್, ಮೊಹಿಯುದ್ದೀನ್ ಫ್ಯಾನ್ಸಿ, ಎಸ್.ಎಂ.ಅಬ್ದುಲ್ ಹಮೀದ್ ಮೊದಲಾದವರು ಭಾಗವಸಿದ್ದರು