ಮಂಗಳೂರು:ಜಿಲ್ಲಾ ಕಾಂಗ್ರೆಸ್ ಉಪ ಸಮಿತಿಯಿಂದ ಕೆಪಿಸಿಸಿ ನಿಯೋಗವನ್ನು ಭೇಟಿ ಮಾಡು ಜಿಲ್ಲೆಯಲ್ಲಿ ಕೋಮು ಸಾಮರಸ್ಯ, ಶಾಂತಿ ಸ್ಥಾಪಿಸಲು ಕ್ರಮಕ್ಕೆ ಆಗ್ರಹಿಸಲಾಯಿತು.
ಜಿಲ್ಲೆ ಯಲ್ಲಿ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು ಜಿಲ್ಲೆಯ ಶಾಂತಿಯನ್ನು ಕದಡುತ್ತಿದ್ದು, ಇದು ಜಿಲ್ಲೆಯ ಜನರ ದೈನಂದಿನ ಬದುಕಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಇದನ್ನು ಸಮರ್ಪಕವಾಗಿ ನಿಭಾಯಿಸಬೇಕಾದ ಜವಾಬ್ದಾರಿ ಸರ್ಕಾರ ಮತ್ತು ಪಕ್ಷದ ಮೇಲಿದೆ ಎಂದು
ತಿಳಿಸಲಾಯಿತು.ಇತ್ತೀಚೆಗೆ ಬಂಟ್ವಾಳದಲ್ಲಿ ನಡೆದ ರಹೀo ಹತ್ಯೆಯ ನಂತರ ಪಕ್ಷದಲ್ಲಿ ಆಂತರಿಕ ಸಂಚಲನ ಉಂಟಾಗಿ, ಕಾರ್ಯಕರ್ತರ ನಡುವೆ ಗೊಂದಲ ಉಂಟಾಗಿದ್ದು ಈ ಬಗ್ಗೆ ವರದಿ ನೀಡಲು ನಿವೃತ್ತ ಡಿಸಿಪಿ, ಕೆಪಿಸಿಸಿ ಪ್ರದಾನ ಕಾರ್ಯದರ್ಶಿ ಜಿ. ಎ. ಬಾವಾ ನೇತೃತ್ವದಲ್ಲಿ ಕೆಪಿಸಿಸಿ ಅಲ್ಪ ಸಂಖ್ಯಾತ ವಿಭಾಗ ರಾಜ್ಯ ಪ್ರದಾನ ಕಾರ್ಯದರ್ಶಿ, ಸುಳ್ಯ ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ ರನ್ನೊಳಗೊಂಡ ಜಿಲ್ಲೆಯ ಪ್ರಮುಖರ ಉಪ ಸಮಿತಿಯನ್ನು ಪಕ್ಷದ ನಿರ್ದೇಶನದಂತೆ ರಚಿಸಲಾಗಿತ್ತು. ಸಮಿತಿಯು ಎಐಸಿಸಿ ಕಾರ್ಯದರ್ಶಿ ರಾಜ್ಯ ಸಭಾ ಸದಸ್ಯ, ಸಿಡಬ್ಲ್ಯೂಸಿ ಸದಸ್ಯ ನಾಸಿರ್ ಹುಸೈನ್ ನೇತೃತ್ವದಲ್ಲಿ ರಚಿಸಲಾದ ಕೆಪಿಸಿಸಿ ನಿಯೋಗವು ಜಿಲ್ಲೆಗೆ ಮಂಗಳೂರಿನಲ್ಲಿ ಭೇಟಿಯಾಗಿ ಜಿಲ್ಲೆಯ ಪ್ರಸಕ್ತ ವಿದ್ಯಮಾನಗಳು, ಕೋಮು ಸಾಮರಸ್ಯ ಮರು ಸ್ಥಾಪಿಸಲು ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ ಮದ್ಯoತರ ವರದಿಯನ್ನು ಸಲ್ಲಿಸಲಾಯಿತು.
ಕೆಪಿಸಿಸಿ ನಿಯೋಗದಲ್ಲಿ ಬೆಂಗಳೂರು ಮಹಾನಗರ ಬಿಬಿಎಂಪಿ ಅಧ್ಯಕ್ಷ, ಶಾಸಕ ಎನ್. ಎ ಹ್ಯಾರಿಸ್, ಮಾಜಿ ಸಚಿವರುಗಳಾದ ಕಿಮ್ಮನೆ ರತ್ನಾಕರ್, ಜಯಪ್ರಕಾಶ್ ಹೆಗ್ಡೆ, ಮತ್ತು ಮಾಜಿ ಸಭಾಪತಿ ವಿ. ಆರ್. ಸುದರ್ಶನ್ ಕಾರ್ಯಾ ಧ್ಯಕ್ಷ ಮಂಜುನಾಥ್ ಭಂಡಾರಿ ಹಾಗೂ ಜಿಲ್ಲೆಯ ನಾಯಕರುಗಳು ಉಪಸ್ಥಿತರಿದ್ದರು ಎಂದು ಕೆ.ಎಂ.ಮುಸ್ತಫ ತಿಳಿಸಿದ್ದಾರೆ.