ಸುಳ್ಯ:ಸಂಘಟನಾ ಚಟುವಟಿಕೆ ಮತ್ತು ಸೇವಾ ಕಾರ್ಯಗಳಿಗೆ ಸುಳ್ಯ ದೇಶಕ್ಕೆ ಮಾದರಿಯಾಗಿದೆ. ಇಲ್ಲಿನ ಯೋಚನೆ, ಯೋಜನೆಗಳು ಮತ್ತು ಸೇವೆಗಳು ಸಮಾಜಕ್ಕೆ ಮತ್ತು ಜೀವನಕ್ಕೆ ಪೂರಕವಾಗಿದೆ ಎಂದು ಬೈಂದೂರು ಶಾಸಕರಾದ ಗುರುರಾಜ್ ಗಂಟಿಹೊಳೆ ಹೇಳಿದ್ದಾರೆ. ಸುಳ್ಯ ತಾಲೂಕು ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ ವತಿಯಿಂದ
ದೀಪಾವಳಿ ಪ್ರಯುಕ್ತ ಸುಳ್ಯದ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ನಡೆದ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಸಾಮಾಜಿಕ ಸೇವಾ ಕಾರ್ಯದಲ್ಲಿ ತೊಡಗಿಕೊಂಡರೆ ಮಾತ್ರ ಸಂಘಟನೆ ಮತ್ತು ಜನಪ್ರತಿನಿಧಿಗಳು ನಿರಂತರ ಚಟುವಟಿಕೆಯಿಂದ ಇರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ನ ಅಧ್ಯಕ್ಷ ಡಾ.ಮನೋಜ್ ಕುಮಾರ್ ಎ.ಡಿ. ಅಧ್ಯಕ್ಷತೆ ವಹಿಸಿದ್ದರು.ಜ್ಯೋತಿ ಆಸ್ಪತ್ರೆಯ ಡಾ.ಸದಾಶಿವ ರಾವ್, ಆಶಾಲತಾ ರಾವ್ ದಂಪತಿಗಳನ್ನು ಸನ್ಮಾನಿಸಲಾಯಿತು. ಸೇವಾ ಕಾರ್ಯ ಚಟುವಟಿಕೆಗೆ ಸಹಕಾರ ನೀಡುವವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ಸೇವಾ ಭಾರತಿ ಹೆಲ್ಪ್ ಲೈನ್ ಟ್ರಸ್ಟ್ನ ಕಾರ್ಯದರ್ಶಿ ಸುದರ್ಶನ ಎಸ್.ಪಿ, ಪ್ರಮುಖರಾದ

ನ.ಸೀತಾರಾಮ, ಚಂದ್ರಶೇಖರ ತಳೂರು, ಡಾ.ಹರಪ್ರಸಾದ್ ತುದಿಯಡ್ಕ, ವೆಂಕಟ್ ವಳಲಂಬೆ, ಕೃಷ್ಣಪ್ರಸಾದ್ ಮಡ್ತಿಲ, ವಿನಯಕುಮಾರ್ ಕಂದಡ್ಕ, ಎ.ಟಿ.ಕುಸುಮಾಧರ, ಸುಧಾಕರ ಕಾಮತ್, ವಿಕ್ರಮ್ ಅಡ್ಪಂಗಾಯ, ಪಿಜಿಎಸ್ಎನ್ ಪ್ರಸಾದ್, ಸುಬೋದ್ ಶೆಟ್ಟಿ ಮೇನಾಲ, ಶಿವಾನಂದ ಕುಕ್ಕುಂಬಳ, ಗುಣವತಿ ಕೊಲ್ಲಂತ್ತಡ್ಕ, ಪುಷ್ಪಾ ಮೇದಪ್ಪ, ಶಶಿಕಲಾ ನೀರಬಿದಿರೆ ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟ್ನ ನಿರ್ವಹಣಾ ಸಮಿತಿಯ ದೇವಿಪ್ರಸಾದ್ ಅರಂಬೂರು ಸ್ವಾಗತಿಸಿ, ಲತಾ ಮಧುಸೂದನ್ ವಂದಿಸಿದರು. ವಾಸುದೇವ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
































