ಸುಳ್ಯ:ಒಂದು ಮುದ್ದಾದ ಬೆಕ್ಕು, ಶ್ವಾನ, ಹಸು, ಆಡು ಹೀಗೆ ಮನುಷ್ಯ ಬದುಕಿನೊಂದಿಗೆ ಬೆಸೆದು ಕೊಂಡಿರುವ ಪ್ರಾಣಿಗಳಿವು. ತಲಾ ತಲಾಂತರಗಳಿಂದ ಈ ಮಾನವ-ಪ್ರಾಣಿ ಅವಿನಾಭಾವ ಸಂಬಂಧ ಬೆಸೆದುಕೊಂಡಿದೆ. ಆಧುನಿಕ ಬದುಕಿನ ವೇಗಕ್ಕೆ ಅನುಗುಣವಾಗಿ ಮನುಷ್ಯನ ಆರೋಗ್ಯ ರಕ್ಷಣೆಗಾಗಿ ಔಷಧಾಲಯಗಳು, ಚಿಕಿತ್ಸಾಲಯಗಳು ತೆರೆದುಕೊಂಡವು. ಕಾಲ ಬದಲಾದಂತೆ ರೋಗ ರುಜಿನಗಳಿಂದ ರಕ್ಷಿಸಲು
ಈ ಸಾಕು ಪ್ರಾಣಿಗಳಿಗೂ ಅತ್ಯುತ್ತಮ ಚಿಕಿತ್ಸೆ, ಆರೈಕೆ, ಪೌಷ್ಟಿಕ ಆಹಾರ ಅತೀ ಅಗತ್ಯವಾಗಿದೆ. ಆದರೆ ಸುಳ್ಯದಂತಹಾ ಪ್ರದೇಶಗಳಲ್ಲಿ ಸಾಕು ಪ್ರಾಣಿಗಳ ಆ ರೀತಿಯ ಚಿಕಿತ್ಸೆ, ಕೇರ್ ನೀಡುವ ಕೇಂದ್ರಗಳು ಇರಲಿಲ್ಲ. ಸಾಕು ಪ್ರಾಣಿಗಳ ಆಧುನಿಕ ಚಿಕಿತ್ಸೆ ಮತ್ತು ಆರೈಕೆಗಾಗಿ ಸುಮಾರು 84 ಕಿ.ಮಿ.ದೂರದ ಮಂಗಳೂರಿನಂತಹಾ ನಗರಕ್ಕೆ ಹೋಗಬೇಕಾಗಿತ್ತು. ಆದರೆ ಇದೀಗ ಸುಳ್ಯದಲ್ಲಿಯೂ ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ ಸಾಕು ಪ್ರಾಣಿಗಳ ಸುಸಜ್ಜಿತ ಚಿಕಿತ್ಸಾಲಯ ಮತ್ತು ಆರೈಕೆ ಕೇಂದ್ರ ತೆರೆದುಕೊಂಡಿದ್ದು ಪ್ರಾಣಿ ಪ್ರಿಯರಲ್ಲಿ ಸಂತಸ ಮೂಡಿಸಿದೆ. ಅದುವೇ ‘ಫ್ರೆಂಡ್ಲಿ ಪಾ ಪೆಟ್ ಕೇರ್’ ಸುಳ್ಯ ಜ್ಯೂನಿಯರ್ ಕಾಲೇಜು ರಸ್ತೆಯಲ್ಲಿ
ಜೇನು ಸೊಸೈಟಿಯ ಕಟ್ಟಡದ ನೆಲ ಅಂತಸ್ತಿನಲ್ಲಿ ಎಲ್ಲಾ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಸುಳ್ಯಕ್ಕೊಂದು ಮುಕುಟ ಮಣಿಯಾಗಿ ‘ಫ್ರೆಂಡ್ಲಿ ಪಾ ಪೆಟ್ ಕೇರ್’ ಆರಂಭಗೊಂಡಿದೆ. ಸಂಸ್ಥೆಯ ಟ್ಯಾಗ್ ಲೈನ್ ಹೇಳುವಂತೆ ‘ವನ್ ಸ್ಟೋಪ್ ಸೊಲ್ಯುಷನ್ ಫಾರ್ ಆಲ್ ಯುವರ್ ಪೆಟ್ ನೀಡ್ಸ್..’ ಎಂಬಂತೆ ಸಾಕು ಪ್ರಾಣಿಗಳ ಚಿಕಿತ್ಸೆ, ಆಹಾರ, ಕೇರ್, ಗ್ರೂಮಿಂಗ್, ಅಸ್ಸೆಸರೀಸ್.. ಹೀಗೆ ಸಾಕು ಪ್ರಾಣಿಗಳ ಎಲ್ಲಾ ಅಗತ್ಯತೆಯನ್ನೂ ಪೂರೈಸುವ ಕೇಂದ್ರವಾಗಿ ಇದು ಮಾರ್ಪಾಡಾಗಿದೆ.
ಪೆಟ್ ಗ್ರೂಮಿಂಗ್:
ಸಾಕು ಶ್ವಾನ, ಬೆಕ್ಕುಗಳ ಹೆಚ್ಚುವರಿ ಕೂದಲುಗಳನ್ನು ತೆಗೆಸಿ ಸೌಂದರ್ಯ ಇಮ್ಮಡಿಗೊಳಿಸಲಾಗುತ್ತದೆ. ಶ್ವಾನ, ಬೆಕ್ಕುಗಳನ್ನು ಸ್ನಾನ ಮಾಡಿಸಲಾಗುತ್ತದೆ. ಚರ್ಮದ ರೋಗಗಳು, ಹೊರ ಪರಜೀವಿಗಳ ಉಪದ್ರವ ಇದ್ದರೆ ಅದನ್ನು ತಡೆಯಲು ಔಷಧೀಯ ಸ್ನಾನವನ್ನೂ ಮಾಡಿಸಲಾಗುತ್ತದೆ.ಶ್ವಾನ, ಬೆಕ್ಕುಗಳ ಉಗುರುಗಳನ್ನು ಕಟ್ ಮಾಡಿ ಸುಂದರಗೊಳಿಸಲಾಗುತ್ತದೆ. ಸೋಮವಾರದಿಂದ ಶನಿವಾರ ತನಕ ಬೆಳಿಗ್ಗೆ 9 ರಿಂದ 4 ಗಂಟೆಯ ತನಕ ಪೆಟ್ ಗ್ರೂಮಿಂಗ್ ಮಾಡಲಾಗುತ್ತದೆ.
ಎಲ್ಲಾ ರೀತಿಯ ಚಿಕಿತ್ಸೆ:
ಶ್ವಾನ, ಬೆಕ್ಕು, ಆಡು, ದನಗಳು, ಮೊಲ, ಹಕ್ಕಿಗಳು ಸೇರಿದಂತೆ ಎಲ್ಲಾ ರೀತಿಯ ಪ್ರಾಣಿ ಪಕ್ಷಿಗಳಿಗೆ ಎಲ್ಲಾ ರೀತಿಯ ಚಿಕಿತ್ಸೆಯನ್ನು ಇಲ್ಲಿ ನೀಡಲಾಗುತ್ತದೆ. ಸೋಮವಾರದಿಂದ ಶನಿವಾರ ತನಕ ಸಂಜೆ 5.30 ರಿಂದ 7.30ರ ತನಕ ನುರಿತ ವೈದ್ಯರು ಚಿಕಿತ್ಸಾ ಸೇವೆಗೆ ಲಭ್ಯರಿರುತ್ತಾರೆ.
ಅಲ್ಲದೆ ಕಾಲ ಕಾಲಕ್ಕೆ ಪ್ರಾಣಿಗಳಿಗೆ ಬೇಕಾದ ಲಸಿಕೆಗಳು, ಜಂತು ಹುಳ ಮತ್ತಿತರ ಒಳಪರ ಜೀವಿಗಳ ಉಪಟಳ ತಡೆಯುವ ಔಷಧಿಗಳನ್ನೂ ನೀಡಲಾಗುತ್ತದೆ. ಅಲ್ಲದೆ ಇತರ ಯಾವುದೇ ರೋಗ ರುಜಿನಗಳನ್ನು ತಡೆಯುವ ಔಷಧಿಗಳು, ಆಧುನಿಕ ಚಿಕಿತ್ಸಾ ವಿಧಾನಗಳು ಇಲ್ಲಿ ಲಭ್ಯವಿದೆ. ಯಾವುದೇ ಇತರ ನಗರ ಪ್ರದೇಶಗಳಲ್ಲಿ
Friendly paw pet care
ದೊರೆಯಬಹುದಾದ ಎಲ್ಲಾ ಅತ್ಯಾಧುನಿಕ ಚಿಕಿತ್ಸೆಗಳು ಇಲ್ಲಿ ಲಭ್ಯವಿದೆ
ಆಹಾರ ಮತ್ತು ಇತರ ವಸ್ತುಗಳು:
ಎಲ್ಲಾ ಪ್ರಾಣಿಗಳಿಗೆ ಬೇಕಾದ ಎಲ್ಲಾ ತರಹದ ಆಹಾರಗಳು, ಪೌಷ್ಟಿಕ ಆಹಾರ, ಪೂರಕ ಆಹಾರಗಳು ಇಲ್ಲಿ ಲಭ್ಯವಿದೆ. ಆಯಾ ಪ್ರಾಣಿಗಳ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ಸೂಕ್ತವಾದ ಪೌಷ್ಟಿಕ ಆಹಾರವನ್ನು ನಿರ್ದೇಶಿಸಿ ಪೂರೈಕೆ ಮಾಡಲಾಗುತ್ತದೆ. ಅಲ್ಲದೆ ಪ್ರಾಣಿಗಳಗೆ ಬೇಕಾದ ಆಧುನಿಕ ವಿನ್ಯಾಸದ ಬೆಲ್ಟ್, ಬಟ್ಟೆ, ಆಟದ ಸಾಮಾನುಗಳು, ಸ್ನಾನಕ್ಕೆ ಬೇಕಾದ ಶಾಂಪೂ, ಸೋಪ್ಗಳು, ಗೂಡು, ಬೆಡ್, ಬಾಕ್ಸ್ ಹೀಗೆ ಇಲ್ಲಿ ಎಲ್ಲಾ ವಸ್ತುಗಳು ಲಭ್ಯವಿದೆ.
ಆಧುನಿಕ ಸೌಲಭ್ಯಗಳು:
ಫ್ರೆಂಡ್ಲಿ ಪಾ ಪೆಟ್ ಕೇರ್ನಲ್ಲಿ ಎಲ್ಲಾ ಅತ್ಯಾಧುನಿಕ ವ್ಯವಸ್ಥೆಗಳು ಇದೆ. ಪ್ರಾಣಿಗಳ ಚಿಕಿತ್ಸೆಗೆ ಬೇಕಾದ ಅತ್ಯಾಧುನಿಕ ಚಿಕಿತ್ಸಾ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಸ್ನಾನ, ಔಷಧ ಸ್ನಾನ ಮಾಡಲು ವಿಶೇಷ ಸ್ನಾನ ಗೃಹ, ಗ್ರೂಮಿಂಗ್ ಮಾಡುವ ವ್ಯವಸ್ಥೆ ಸೇರಿ ವಿಶಾಲವಾದ ಕಟ್ಟಡದಲ್ಲಿ ಎಲ್ಲಾ ಆಧುನಿಕ ಸೌಲಭ್ಯವನ್ನೂ ಮಾಡಲಾಗಿದೆ. ಪ್ರಾಣಿಗಳ ಚಿಕಿತ್ಸೆ ಮತ್ತು ಕೇರ್ಗೆ ಬೇಕಾದ ವಿಶಾಲ ವ್ಯವಸ್ಥೆ ಇಲ್ಲಿದೆ.
ದಂತ ಚಿಕಿತ್ಸೆ, ಫಿಸಿಯೋಥೆರಾಫಿ:
ಮುಂದಿನ ದಿನಗಳಲ್ಲಿ ಶ್ವಾನ, ಬೆಕ್ಕು ಮತ್ತಿತರ ಪ್ರಾಣಿಗಳ ದಂತ ಚಿಕಿತ್ಸೆ ಮಾಡಲಾಗುತ್ತದೆ. ಅಲ್ಲದೆ ಪ್ರಾಣಿಗಳ ಶಸ್ತ್ರ ಚಿಕಿತ್ಸೆಗೆ ಬೇಕಾದ ಆಪರೇಷನ್ ಥಿಯೇಟರ್ ಆರಂಭವಾಗಲಿದೆ. ಅಲ್ಲದೆ ಪ್ರಾಣಿಗಳಿಗೆ ಫಿಸಿಯೋಥೆರಫಿ ಮಾಡುವ ಯೋಜನೆ ಕೂಡ ಇದೆ ಎನ್ನುತ್ತಾರೆ ಫ್ರೆಂಡ್ಲಿ ಪಾ ಪೆಟ್ ಕೇರ್ನ ಮಾಲಕರಾದ ನಿರ್ಮಲಾ ಪ್ರಭು ಮತ್ತು ಕಲ್ಪಶ್ರೀ ಧನ್ಯರಾಜ್.
ಸಮಯ ಗಮನಿಸಿ:
ಫ್ರೆಂಡ್ಲಿ ಪಾ ಕಾರ್ಯನಿರ್ವಹಿಸುವ ಸಮಯ:
ಸೋಮವಾರದಿಂದ ಶನಿವಾರ ತನಕ ಪೂ.9ರಿಂದ ರಾತ್ರಿ 8.30.
ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1.
ವೈದ್ಯರು ಲಭ್ಯರಿರುವ ಸಮಯ:
ಸೋಮವಾರದಿಂದ ಶನಿವಾರ ತನಕ ಸಂಜೆ 5.30ರಿಂದ ರಾತ್ರಿ 7.30.
ಗ್ರೂಮಿಂಗ್ ಸಮಯ:
ಸೋಮವಾರದಿಂದ ಶನಿವಾರ ತನಕ ಪೂ.9ರಿಂದ ಸಂಜೆ 4.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
9482822709