ಮೆಕ್ಸಿಕೊ ಸಿಟಿ: ಫಿಫಾ ವಿಶ್ವಕಪ್ ಟೂರ್ನಿಗೆ ಗುರುವಾರ ತಡ ರಾತ್ರಿ ವರ್ಣರಂಜಿತ ಆರಂಭ ಕಂಡಿದೆ.ಅಮೆರಿಕ, ಕೆನಡಾ, ಮೆಕ್ಸಿಕೊ ರಾಷ್ಟ್ರಗಳ ಆತಿಥ್ಯದಲ್ಲಿ ನಡೆಯುತ್ತಿರುವ ಈ ಟೂರ್ನಿಯು 48 ತಂಡಗಳು ಭಾಗಹಿಸುತ್ತಿದೆ. ಮೊದಲ ಪಂದ್ಯದಲ್ಲಿ ಮೆಕ್ಸಿಕೊ ತಂಡ ದಕ್ಷಿಣ ಆಫ್ರಿಕಾ ತಂಡವನ್ನು ಪರಾಭವಗೊಳಿಸಿ ಶುಭಾರಂಭ ಮಾಡಿದೆ.
ಮೆಕ್ಸಿಕೊದ
ಎಸ್ಟಾಡಿಯೋ ಅಜ್ಟೆಕಾ ಕ್ರೀಡಾಂಗಣದಲ್ಲಿ ನಡೆದ ರೋಮಾಂಚಕ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ಮೆಕ್ಸಿಕೋ ತಂಡವು ದಕ್ಷಿಣ ಆಫ್ರಿಕಾ ವಿರುದ್ಧ 2-0 ಗೋಲುಗಳ ಗೆಲುವು ದಾಖಲಿಸಿದೆ.ಮೆಕ್ಸಿಕೋ ಪರ ಯೂಲಿಯನ್ ಕ್ವಿನೋನಸ್ 9ನೇ ನಿಮಿಷದಲ್ಲಿ ಮೊದಲ ಗೋಲು ಬಾರಿಸಿದರು. ದ್ವಿತೀಯಾರ್ಧದ 67ನೇ ನಿಮಿಷದಲ್ಲಿ ಮೆಕ್ಸಿಕೋದ ರೌಲ್ ಜಿಮೆನೆಜ್ ಹೆಡ್ಡರ್ ಮೂಲಕ ಗೋಲು ಬಾರಿಸಿ ಮುನ್ನಡೆಯನ್ನು 2-0ಗೆ ವಿಸ್ತರಿಸಿದರು.ವಿಶ್ವವಿಖ್ಯಾತ ಗಾಯಕಿ ಶಕೀರಾ ಅವರ ಸಾಂಸ್ಕೃತಿಕ ಪ್ರದರ್ಶನದೊಂದಿಗೆ ಪಂದ್ಯಾಕೂಟ ಆರಂಭವಾಯಿತು.














