ಸುಳ್ಯ:ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಬೃಹದಾಕಾರದ ಕಾಡುಕೋಣವೊಂದು ಪ್ರತ್ಯಕ್ಷವಾಗಿ ಸಾರ್ವಜನಿಕರಿಗೆ ದರ್ಶನ ನೀಡಿದೆ. ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿ ಕನಕಮಜಲು ಸುಣ್ಣಮೂಲೆ ಭಾಗದಲ್ಲಿ ಕಾಡುಕೋಣ ಕಂಡು ಬಂದಿದೆ. ಹೆದ್ದಾರಿ ಬದಿಯಲ್ಲಿ
ಕಂಡು ಬಂದ ಕಾಡು ಕೋಣದ ವೀಡಿಯೋ ಕೂಡ ಸಖತ್ ವೈರಲ್ ಆಗಿದೆ. ಈ ಭಾಗದಲ್ಲಿ ಕೃಷಿ ತೋಟಗಳಿಗೂ ಕಾಡು ಕೋಣದ ಹಾವಳಿ ಅಧಿಕವಾಗಿದ್ದು ವಿವಿಧ ಕಡೆಗಳಲ್ಲಿ ಕಾಡುಕೋಣ ಸುತ್ತಾಟ ನಡೆಸಿದೆ ಎಂದು ಕೃಷಿಕರು ಹೇಳುತ್ತಾರೆ.














