ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಿತಿದೆ. ಬೆಳಿಗ್ಗೆ 7 ಗಂಟೆಗೆ ಮತದಾನ ಆರಂಭಗೊಂಡಿದೆ. ದೆಹಲಿಯಲ್ಲಿ 70 ಸ್ಥಾನಗಳಿಗೆ 699 ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ.1.56 ಕೋಟಿ ಮತದಾರರಿದ್ದಾರೆ.ಆಮ್ ಆದ್ಮಿ ಪಕ್ಷ ಮೂರನೇ ಬಾರಿ
ಆಡಳಿತದ ಚುಕ್ಕಾಣಿ ಹಿಡಿಯಲು ಎದುರು ನೋಡುತ್ತಿದೆ. ಇನ್ನೊಂದೆಡೆ ಬಿಜೆಪಿ, ಕಾಂಗ್ರೆಸ್ ಕೂಡ ಅಧಿಕಾರಕ್ಕೆ ಬರುವ ಭರವಸೆಯಲ್ಲಿದೆ. ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದೆ.ಶಾಂತಿಯುತ ಮತದಾನ ಮತ್ತು ಭದ್ರತೆಗಾಗಿ 200 ಅರೆಸೇನೆ ಪಡೆ, 35,626 ದೆಹಲಿ ಪೊಲೀಸ್ ಸಿಬ್ಬಂದಿ, 19 ಸಾವಿರ ಹೋಮ್ಗಾರ್ಡ್ಗಳನ್ನು ಚುನಾವಣಾ ಆಯೋಗ ನೇಮಕ ಮಾಡಿದೆ.ಮತಎಣಿಕೆ ಫೆ.8ರಂದು ನಡೆಯಲಿದೆ.