ಕಡಬ: ಕಡಬ-ಪಂಜ ಜಿಲ್ಲಾ ಮುಖ್ಯ ರಸ್ತೆ ಬದಿಯ ಮರ ಬಿದ್ದು ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ. ಕಡಬ-ಪಂಜ ರಸ್ತೆಯ ಕೋಡಿಂಬಾಳ ಗ್ರಾಮದ ತೆಕ್ಕಡ್ಕ ಎಂಬಲ್ಲಿ ಮರ ಬಿದ್ದ ಪರಿಣಾಮ ಬೈಕ್ ಸವಾರ ಯಶವಂತ ಎಂಬವರಿಗೆ ಮರದ ತುಂಡು ತಾಗಿ ಗಾಯಗೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ಮರ ಬಿದ್ದು ಎಡಮಂಗಲ ನಿವಾಸಿ ಸೀತಾರಾಮ ಗೌಡ ಅವರು ಮೃತಪಟ್ಟಿದ್ದರು. ರಸ್ತೆಯಲ್ಲಿ ಮಂಗಳವಾರ ಸಂಜೆ ಚಲಿಸುತ್ತಿದ್ದ ಬೈಕಿನ ಮೇಲೆ ಮತ್ತೆ ಮರ ಬಿದ್ದು
ಅಪಘಾತ ಸಂಭವಿಸಿದೆ.