ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ,ಜೇಸಿಐ ಪಂಜ ಪಂಚಶ್ರೀ, ಲಯನ್ಸ್ ಕ್ಲಬ್ ಪಂಜ ಇದರ ಆಶ್ರಯದಲ್ಲಿ ಆಟಿ ತಿಂಗಳ ವಿಶೇಷ ಕಾರ್ಯಕ್ರಮ ‘ಆಟಿ ನೆಂಪು-2026’ ಪಂಜದ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಆಟಿ ನೆಂಪು ಕಾರ್ಯಕ್ರಮದ ಅಂಗವಾಗಿ
ಚಿನ್ನೆಮಣೆ ಸ್ಪರ್ಧೆ, ಅರೆಭಾಷೆ ಪ್ರಹಸನ ಸ್ಪರ್ಧೆ, ಚಿತ್ರಕಲೆ ಸ್ಪರ್ಧೆ, ಅರೆಭಾಷೆ ಭಾಷಣ ಸ್ಪರ್ಧೆ, ಆಟಿ ಖಾದ್ಯ ಸ್ಪರ್ಧೆ, ನೀರ್ ದೋಸೆ ಹೊಯ್ಯುವ ಸ್ಪರ್ಧೆ ಮತ್ತು ಹಸಿ ತರಕಾರಿಗಳ ಆಲಂಕಾರಿಕವಾಗಿ ಜೋಡಿಸುವ ಸ್ಪರ್ಧೆ, ವಾಟ್ಸಾಪ್ನಲ್ಲಿ ಅರೆಭಾಷೆ ಸ್ವರಚಿತ ಕವನ ಸ್ಪರ್ಧೆಗಳು ನಡೆಯಿತು.
ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಹರೀಶ್ ಆಟಿ ನೆಂಪು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ದೇವಿಪ್ರಸಾದ್ ಚಿಕ್ಮುಳಿ ಅಧ್ಯಕ್ಷತೆ ವಹಿಸಿದ್ದರು.ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿ ಪ್ರಸಾದ್ ಕಾನತ್ತೂರ್, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಸಂಚಾಲಕ ಚಂದ್ರಶೇಖರ ಪೇರಾಲು,ಸದಸ್ಯ ಪಿ.ಎಸ್ ಕಾರ್ಯಪ್ಪ, ಲಯನ್ಸ್ ಕ್ಲಬ್ ಅಧ್ಯಕ್ಷ ಆನಂದ ಗೌಡ ಜಳಕದ ಹೊಳೆ, ಕಾರ್ಯದರ್ಶಿ ವಾಸುದೇವ ಮೇಲ್ಪಾಡಿ, ಕಾರ್ಯಕ್ರಮ ನಿರ್ದೇಶಕ ವಿಜೇಶ್ ಹಿರಿಯಡ್ಕ,ಜೇಸಿಐ ಪಂಜ ಪಂಚಶ್ರೀ ಕಾರ್ಯದರ್ಶಿ ಪ್ರಕಾಶ್ ಅಳ್ಪೆ
ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿಜೇಶ್ ಹಿರಿಯಡ್ಕ ಸ್ವಾಗತಿಸಿದರು. ಶಶಿಧರ್ ಪಳಂಗಾಯ ನಿರೂಪಿಸಿದರು. ಪ್ರಕಾಶ್ ಅಳ್ಪೆ ವಂದಿಸಿದರು. ಬಳಿಕ ವಿವಿಧ ಸ್ಪರ್ಧಾ ಕಾರ್ಯಕ್ರಮಗಳು ನಡೆಯಿತು.











