ಸುಳ್ಯ:ಚಲನಚಿತ್ರ ಪುಸ್ತಕ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿ ಪಡೆದ
ಸುಳ್ಯದ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಪದವಿ ಪೂರ್ವ ವಿಭಾಗದ ಉಪನ್ಯಾಸಕ ಡಾ.ಪ್ರದೀಪ್ ಕೆಂಚನೂರು ಅವರಿಗೆ ಸುಳ್ಯದಲ್ಲಿ ಅದ್ದೂರಿ ಸ್ವಾಗತ ನೀಡಲಾಯಿತು. ‘ನಾನಿರುವುದು ನಿಮಗಾಗಿ…ನಾಡಿರುವುದು ನನಗಾಗಿ…ಕನ್ನಡ ಚಲನಚಿತ್ರದ ತತ್ವ ಮತ್ತು ರಾಜಕೀಯ ಕುರಿತು ಬರೆದ ಅಧ್ಯಯನಾತ್ಮಕ ಪುಸ್ತಕಕ್ಕೆ
ಗುಜರಾತಿನಲ್ಲಿ ನಡೆದ 72 ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಡಾ.ಪ್ರದೀಪ್ ಕೆಂಚನೂರು ಅವರು ಸ್ವರ್ಣಕಮಲ ಪ್ರಶಸ್ತಿ ಸ್ವೀಕರಿಸಿದರು. ಪ್ರಶಸ್ತಿ ಸ್ವೀಕರಿಸಿ ಸುಳ್ಯಕ್ಕೆ ಆಗಮಿಸಿದ ಅವರನ್ನು ಬಸ್ ನಿಲ್ದಾಣದಲ್ಲಿ ಸ್ವಾಗತಿಸಿ ತೆರೆದ ವಾಹನದಲ್ಲಿ ಗಾಂಧಿನಗರ ಕೆಪಿಎಸ್ಗೆ ಕರೆ ತರಲಾಯಿತು.ಬಳಿಕ ಶಾಲಾ ಎಸ್ಡಿಎಂಸಿ ವತಿಯಿಂದ ಸನ್ಮಾನಿಸಲಾಯಿತು.
ತಹಶೀಲ್ದಾರ್ ಎಂ.ಮಂಜುಳ,ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಂ.ಮುಸ್ತಫ,ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ

ವಿನಯಕುಮಾರ್ ಕಂದಡ್ಕ, ಎಂ.ವೆಂಕಪ್ಪ ಗೌಡ, ಎನ್.ಎ.ರಾಮಚಂದ್ರ, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್.ಹರಗಿ, ಪಶು ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ನಿತಿನ್ ಪ್ರಭು, ಗಾಂಧಿನಗರ ಕೆಪಿಎಸ್ ಕಾರ್ಯಾಧ್ಯಕ್ಷ ಚಿದಾನಂದ ಕುದ್ಪಾಜೆ, ಪ್ರಾಂಶುಪಾಲೆ ಪರಮೇಶ್ವರಿ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಬಿ.ಇಬ್ರಾಹಿಂ, ಉಪನ್ಯಾಸಕರಾದ ಅಬ್ದುಲ್ ಸಮದ್, ರಾಜೇಶ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಅಶ್ವಿನಿ,ಪ್ರೌಢ ಶಾಲಾ ವಿಭಾಗದ ಮುಖ್ಯ ಶಿಕ್ಷಕಿ ಜ್ಯೋತಿ ಲಕ್ಷ್ಮಿ, ಸುಳ್ಯ ಕೆಪಿಎಸ್ ಪ್ರಾಂಶುಪಾಲ ಮೋಹನ್ ಗೌಡ ಬೊಮ್ಮೆಟ್ಟಿ, ಉಪಪ್ರಾಂಶುಪಾಲ ಪ್ರಕಾಶ್ ಮೂಡಿತ್ತಾಯ, ಪ್ರಮುಖರಾದ

ಪಿ.ಬಿ.ಸುಧಾಕರ ರೈ, ಚಂದ್ರಶೇಖರ ಪೇರಾಲು, ದಿನೇಶ್ ಮಡಪ್ಪಾಡಿ, ಶರೀಫ್ ಕಂಠಿ, ನವೀನ್ ಕುದ್ಪಾಜೆ, ಅಬ್ದುಲ್ ಅಜೀಜ್, ವಿಜಯಕುಮಾರ್ ದೇಂಗೋಡಿ,ರಾಮಚಂದ್ರ ಪಲ್ಲತ್ತಡ್ಕ,ಪ್ರಶಾಂತ್ ಕಾಯರ್ತೋಡಿ,ಹರೀಶ್ , ಅನಿತಾ ಕಾಯರ್ತೋಡಿ, ಭುವನ ನಾವೂರು, ಭವಾನಿ ಟೀಚರ್, ಸುಪ್ರೀತ್ ಮೋಂಟಡ್ಕ, ರಿಯಾಝ್ ಕಟ್ಟೆಕ್ಕಾರ್, ರಂಜಿತ್ ಪೂಜಾರಿ, ಚಂದ್ರಮತಿ.ಕೆ ಮತ್ತಿತರರು ಉಪಸ್ಥಿತರಿದ್ದರು.
ಕುಂದಾಪುರದ ಕೆಂಚನೂರಿನವರಾದ ಡಾ.ಪ್ರದೀಪ್ ಕೆಂಚನೂರು ಗಾಂಧಿನಗರ ಕೆ.ಪಿ.ಎಸ್.ನಲ್ಲಿ ಉಪನ್ಯಾಸಕರಾಗಿದ್ದಾರೆ.








