ಸುಳ್ಯ:25 ಸೆಂಟ್ಸ್ವರೆಗಿನ (1000 ಚ.ಮಿ.) ವಿನ್ಯಾಸ ಅನುಮೋದನೆ, 9/11 ಮತ್ತು ಖಾತಾ ಅನುಮೋದನೆಗೆ ಸ್ಥಳೀಯ ಸಂಸ್ಥೆಗಳಿಗೆ ಸರಕಾರ. ಅಧಿಕಾರ ನೀಡಿದೆ.ಈ ಬೇಡಿಕೆಯನ್ನು ಮುಂದುರಿಸಿ ಕರಾವಳಿ ನಗರ ಪ್ರಾಧಿಕಾರಗಳ ಒಕ್ಕೂಟ ಸರಕಾರಕ್ಕೆ ಮನವಿ ಸಲ್ಲಿಸಿತ್ತು. ಒಕ್ಕೂಟದ ಈ ಮನವಿಗೆ ಸರ್ಕಾರದ ಸ್ಪಂದನೆ ನೀಡಿದೆ ಎಂದು ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹಾಗು ಕರಾವಳಿ ನಗರ ಪ್ರಾಧಿಕಾರಗಳ ಒಕ್ಕೂಟದ ಸಂಚಾಲಕ ಕೆ.ಎಂ. ಮುಸ್ತಫ ಹೇಳಿದ್ದಾರೆ. ಸುಳ್ಯ ಯೋಜನಾ ಪ್ರಾಧಿಕಾರದ
ಕಚೇರಿಯಲ್ಲಿ ಸುದ್ದಿಗೋಷ್ಠೊಷ್ಠಿಯಲ್ಲಿ ಮಾತನಾಡಿದ ಅವರು
ಕರಾವಳಿ ಜಿಲ್ಲೆಗಳ ಭೌಗೋಳಿಕ ಪರಿಸ್ಥಿತಿ ಇತರೆ ಜಿಲ್ಲೆಗಳಿಗಿಂತ ಭಿನ್ನವಾಗಿದ್ದು, ಇಲ್ಲಿ ತುಂಡು ಭೂಮಿಗಳು ಹೆಚ್ಚಾಗಿವೆ.ಇಲ್ಲಿ 1 ಸೆಂಟ್ ಕನಿಷ್ಠ ವಿಸ್ತೀರ್ಣದಿಂದ ಪ್ರಾರಂಭಗೊಳ್ಳುವ ಭೂಮಿಗಳಿವೆ.ರಾಜ್ಯದ ಇತರ ಜಿಲ್ಲೆಗಳಿಗಿಂತ ಇಲ್ಲಿನ ಬೌಗೊಳಿಕ ಸ್ಥಿತಿಗತಿಗಳು ವಿಭಿನ್ನವಾಗಿದ್ದು, ತೋಡು, ನದಿ, ಸಮುದ್ರ ಪೋರಂಬೊಕು, ಕಾಡು, ಗುಡ್ಡ, ಬೆಟ್ಟ ಅರಣ್ಯ ಭೂಮಿಗಳು ಹೆಚ್ಚಾಗಿರುವ ಜಿಲ್ಲೆ ಗಳಾಗಿರುವುದರಿಂದ ಕರಾವಳಿಗೆ ಪ್ರತ್ಯೇಕ ವಲಯ ನಿಯಮಾವಳಿ ರಚಿಸಬೇಕೆಂದು ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳ ನಗರಾಭಿವೃದ್ಧಿ ಪ್ರಾಧಿಕಾರಗಳ ಒಕ್ಕೂಟ ರಚಿಸಿ ಮನವಿ ಮಾಡಲಾಗಿತ್ತು. ಇದೀಗ ನಿಯಮಾವಳಿಗಳಲ್ಲಿ ಸರಳೀಕರಣಗೊಳಿಸಿ
ಜನರಿಗೆ ದಾಖಲೆಗಳನ್ನು ಸರಿಪಡಿಸಲು,ಮನೆ ನಿರ್ಮಾಣ, 9/11, ಖಾತೆ ಪಡೆಯಲು ಅನುಕೂಲ ಮಾಡಿರುವುದು ಸ್ವಾಗತಾರ್ಹ ಎಂದರು.
ಗ್ರಾಮಾಂತರ ಪ್ರದೇಶಗಳಲ್ಲಿ ನಿಯಮಾವಳಿ ಜಾರಿಗೆ ಬರುವ ಮೊದಲಿನ ಬೆಳವಣಿಗೆಗಳಲ್ಲಿ ಸಣ್ಣ-ಸಣ್ಣ ವಿಸ್ತೀರ್ಣದ ನಿವೇಶನಗಳಿಗೆ 9/11, ವಿನ್ಯಾಸ ಅನುಮೋದನೆ ನೀಡಲು, ಕಟ್ಟಡ ನಿರ್ಮಾಣ ಪರವಾನಿಗೆ ನೀಡುವುದು ಕಷ್ಟಕರವಾಗಿತ್ತು.ಅಲ್ಲದೇ 25 ಸೆಂಟ್ಸ್ ವರೆಗಿನ ಜಾಗವನ್ನು ಬಹು-ನಿವೇಶನ ಅನುಮೋದನೆ ಸಂದರ್ಭದಲ್ಲಿ ಪಾರ್ಕ್ ಮತ್ತು ಪಾರ್ಕಿಂಗ್ ಮೀಸಲಾತಿಯಿಂದ ಒಂದು ಬಾರಿ ವಿನಾಯಿತಿ ನೀಡಿ, ಜಾಗ ಬಿಟ್ಟುಕೊಡುವ ಬದಲು ದಂಡನೆ ವಿಧಿಸಿ ಅನುಮೋದನೆ ನೀಡಬೇಕು ಹಾಗೂ ಈ ಹಿಂದಿನಂತೆ ಗ್ರಾಮ ಪಂಚಾಯತ್ಗಳಿಗೆ ಅನುಮೋದನೆಗೆ ಅವಕಾಶ ನೀಡಬೇಕು ಎಂದು ಕರಾವಳಿ ಜಿಲ್ಲೆಗಳ ನಗರಾಭಿವೃದ್ಧಿ ಪ್ರಾಧಿಕಾರಗಳ ಒಕ್ಕೂಟದ ವತಿಯಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಸಾರ್ವಜನಿಕರಿಗೆ ಉಂಟಾಗುತ್ತಿರುವ ಅನಾನುಕೂಲ ಮತ್ತು
ಅಧಿಕಾರಿಗಳಿಗೆ ಇರುವ ಕಾನೂನು ತೊಡಕುಗಳ ಬಗ್ಗೆ ಸರ್ಕಾರಕ್ಕೆ ಕಾಲ ಕಾಲಕ್ಕೆ ವಿವರಿಸಲಾಗಿತ್ತು. ಅಲ್ಲದೇ ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಚಿವ ಸಂಪುಟ ಸಭೆಗೆ ಆಗಮಿಸಿದ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವರಾದ ಯತೀದ್ರ ಸಿದ್ದರಾಮಯ್ಯ ರವರಿಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಸರ್ಕಾರ ಈ ಬೇಡಿಕೆಗೆ ಸ್ಪಂದಿಸಿಸ್ಪಂದಿಸಿದ್ದು, ಈಗ 25 ಸೆಂಟ್ಸ್ (1000 ಚ.ಮೀ) ವರೆಗಿನ ವಿನ್ಯಾಸ ಅನುಮೋದನೆ, 9/11 ಮತ್ತು ಖಾತಾ ಅನುಮೋದನೆಗೆ ಸ್ಥಳೀಯ ಸಂಸ್ಥೆಗಳಿಗೆ ಅಧಿಕಾರ ಪ್ರತ್ಯಾಯೋಜನೆ ಮಾಡಿದೆ.
ಖಾಸಗಿ ರಸ್ತೆ, ಸರ್ಕಾರಿ ಸಂಪರ್ಕ ರಸ್ತೆಗಳ ಬಗ್ಗೆ ಇರುವ ಸಮಸ್ಯೆಗಳನ್ನು ಈಗಾಗಲೇ ಸರ್ಕಾರ ಬಗೆ ಹರಿಸಿದ್ದು ಸರ್ಕಾರದ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ. ಕಟ್ ಕನ್ವರ್ಷನ್ ಬಗ್ಗೆ ನಿಯಮಗಳ ಸರಳೀಕರಣದ ಸುತ್ತೋಲೆ ಸಾರ್ವಜನಿಕ ಆಕ್ಷೇಪಣೆ ಹಂತದಲ್ಲಿದ್ದು ಶೀಘ್ರದಲ್ಲೇ ಆದೇಶ ಹೊರ ಬರಲಿದೆ, ಕರಾವಳಿ ಜಿಲ್ಲೆಗಳನ್ನು ಹಿಲ್ ಏರಿಯಾ ಆಗಿ ಪರಿಗಣಿಸಲಾಗಿದ್ದು ಇದರಿಂದ ಕನಿಷ್ಠ ರಸ್ತೆ ಅಗಲ 3.65 ಮೀಟರ್ ( 13 ಅಡಿ ) ಯ ಪ್ರಯೋಜನ ನಮ್ಮ ಜಿಲ್ಲೆಗಳಿಗೂ ವಿಸ್ತರಿಸಲಿದೆ.
ನಗರ ವ್ಯಾಪ್ತಿಯಲ್ಲಿ ಈಗಾಗಲೇ ಬಿ ಖಾತೆ ಹೊಂದಿದವರಿಗೆ ಎ ಖಾತೆ ಪಡೆಯುವ ಅವಕಾಶ ಇದೆ. ಗ್ರಾಮಾಂತರಕ್ಕೂ ಕ್ರಮಬದ್ದವಲ್ಲದ ಸ್ವತ್ತುಗಳಿಗೆ ಬಿ ಖಾತೆ ಸೌಲಭ್ಯ ವಿಸ್ತರಣೆ ಮಾಡಲಾಗಿದೆ.1200 ಚದರ ಅಡಿ ವರೆಗೆ ಒಕ್ಯುಪನ್ಸಿ ಸರ್ಟಿಫಿಕೇಟ್, ಕಂಪ್ಲೀಷನ್ ಸರ್ಟಿಫಿಕೇಟ್ ಪಡೆಯುವುದರಿಂದ ವಿನಾಯಿತಿ ನೀಡಲಾಗಿದೆ. ಈ ಎಲ್ಲಾ ಸೌಲಭ್ಯಗಳು ಕಾಂಗ್ರೆಸ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಭೂ ಗ್ಯಾರಂಟಿ ಯೋಜನೆ
ಎಂದು ಕೆ. ಎಂ. ಮುಸ್ತಫ ಬಣ್ಣಿಸಿದರು.
ಸುದ್ದಿಗೋಷ್ಠಿಯಲ್ಲಿ ನಗರ ಕಾಂಗ್ರೆಸ್ ಅಧ್ಯಕ್ಷ ಶಶಿಧರ ಎಂ.ಜೆ.ಉಪಸ್ಥಿತರಿದ್ದರು.







