ಗ್ಲಾಸ್ಗೊ: ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪ್ಯಾರಾ ಶಾಟ್ಪುಟ್ ಅಥ್ಲೀಟ್ ಶರ್ಮಿಳಾ ಧನಕರ್ ಚಿನ್ನಕ್ಕೆ ಮುತ್ತಿಕ್ಕಿದರೆ, ಕನ್ನಡತಿ ಶಿಲ್ಪಾ ಶೈಲಾ ಅವರು ಕಂಚಿನ ಪದಕಕ್ಕೆ ಕೊರಳೊಡ್ಡಿದರು.ಈ ಸಾಧನೆ ಮಾಡಿದ ಭಾರತದ ಮೊದಲ ಪ್ಯಾರಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಶರ್ಮಿಳಾ ಪಾತ್ರರಾದರು. ಅವರು
9.81 ಮೀಟರ್ಸ್ ದೂರ ಥ್ರೋ ಮಾಡಿದರು.ಇದೇ ವಿಭಾಗದಲ್ಲಿ ಶರ್ಮಿಳಾ ಅವರಿಗೆ ಸ್ಪರ್ಧೆಯೊಡ್ಡಿದ್ದ ಕನ್ನಡತಿ ಶಿಲ್ಪಾ ಶೈಲಾ ಅವರು ಕಂಚು ಪಡೆದರು. ಶಿಲ್ಪಾ ಅವರು 7.26 ಮೀ. ದೂರ ಥ್ರೋ ಮಾಡಿದರು.ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಪದಕಗಳ ಬೇಟೆ ಮುಂದುವರಿದಿದೆ.ಹೈಜಂಪ್ ಅಥ್ಲೀಟ್ ಸರ್ವೇಶ್ ಕುಶಾರೆ ಮತ್ತು ವೇಟ್ಲಿಫ್ಟರ್ ವಲ್ಲೂರಿ ಅಜಯ್ ಬಾಬು ಬೆಳ್ಳಿ ಪದಕ ಗೆದ್ದರು. ಇದರೊಂದಿಗೆ ಭಾರತದ ಪದಕಗಳ ಸಂಖ್ಯೆ 10ಕ್ಕೆ ಏರಿದೆ.









