ಗ್ಲಾಸ್ಗೊ:ಭಾರತದ ಬಾಕ್ಸರ್ಗಳಾದ ಜಾಸ್ಮಿನ್ ಲಂಬೋರಿಯಾ ಮತ್ತು ಪ್ರೀತಿ ಪವಾರ್ ಅವರು ಇಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಮಹಿಳೆಯರ 57 ಕೆ.ಜಿ. ಮತ್ತು 54 ಕೆ.ಜಿ. ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಮಹಿಳೆಯರ 54 ಕೆ.ಜಿ. ವಿಭಾಗದ ಫೈನಲ್ ಪಂದ್ಯದಲ್ಲಿ ಪ್ರೀತಿ ಪವಾರ್ ಅವರು ಕೆನಡಾದ ಸ್ಕಾರ್ಲೆಟ್ ಡೆಲ್ಗಾಡೋ ವಿರುದ್ಧ
5-0 ಅಂತರದ ಭರ್ಜರಿ ಗೆಲುವು ಸಾಧಿಸಿದರು. ಮೊದಲ ಸುತ್ತಿನಿಂದಲೇ ಪ್ರಬಲ ಆರಂಭ ಪಡೆದುಕೊಂಡರು.ಹಾಲಿ ವಿಶ್ವ ಚಾಂಪಿಯನ್ ಜಾಸ್ಮಿನ್ ಲಂಬೋರಿಯಾ ಅವರು ಉತ್ತರ ಐರ್ಲೆಂಡ್ನ ಮೈಕೆಲಾ ವಾಲ್ಷ್ ವಿರುದ್ಧ 5-0 ಅಂತರದ ಜಯ ಗಳಿಸಿದರು.
ಗ್ಲಾಸ್ಗೊ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಭಾರತವು 8 ಚಿನ್ನ, 15 ಬೆಳ್ಳಿ, 7 ಕಂಚಿನ ಪದಕ ಸೇರಿದಂತೆ ಇದುವರೆಗೆ 30 ಪದಕಗಳನ್ನು ಗೆದ್ದಿದೆ. ಈ ಮೂಲಕ ಪದಕ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ.
ಎರಡು ಬಾರಿಯ ಒಲಿಂಪಿಕ್ಸ್ ಪದಕ ವಿಜೇತ ನೀರಜ್ ಚೋಪ್ರಾ ಅವರು ಶನಿವಾರ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದ ಜಾವೆಲಿನ್ ಥ್ರೊ ಫೈನಲ್ನಲ್ಲಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಮತ್ತೊಬ್ಬ ಭಾರತೀಯ ಕ್ರೀಡಾಪಟು ಯಶ್ವೀರ್ ಸಿಂಗ್ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ.
ನೀರಜ್ ಚೋಪ್ರಾ ತಮ್ಮ ಎರಡನೇ ಪ್ರಯತ್ನದಲ್ಲಿ 85.83 ಮೀಟರ್ ಥ್ರೊ ಮಾಡಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ.ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಮೊದಲ ಬಾರಿಗೆ ಸ್ಪರ್ಧಿಸಿರುವ 24 ವರ್ಷದ ಯಶ್ವೀರ್ ಸಿಂಗ್ ತಮ್ಮ ಆರನೇ ಹಾಗೂ ಅಂತಿಮ ಯತ್ನದಲ್ಲಿ 85.83 ಮೀಟರ್ ದೂರ ಎಸೆದು ಕಂಚಿನ ಪದಕ ಗೆದ್ದಿದ್ದಾರೆ.ಶ್ರೀಲಂಕಾ ರುಮೇಶ್ ತರಂಗ ಪಥಿರಗೆ ತಮ್ಮ ಪ್ರಯತ್ನದಲ್ಲಿ 89.75 ಮೀ. ಥ್ರೊ ಮಾಡಿ ಚಿನ್ನದ ಪದಕ ಗೆದ್ದು ಬೀಗಿದ್ದಾರೆ.












