ಸುಳ್ಯ:ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಅವರು ಏ.19ರಂದು ಸುಳ್ಯ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ. ಸುಳ್ಯ ನಗರಕ್ಕೆ ಬೆಳಿಗ್ಗೆ ಆಗಮಿಸಿದ ಅವರು ಸುಳ್ಯ ನಗರದಲ್ಲಿ ಬೃಹತ್ ರೋಡ್ ಶೋ ಮೂಲಕ ಮತ ಯಾಚನೆ ನಡೆಸಿದರು. ಹಳೆಗೇಟಿನಿಂದ ಆರಂಭಗೊಂಡ
ರೋಡ್ ಶೋದಲ್ಲಿ ಅಭ್ಯರ್ಥಿ ಪದ್ಮರಾಜ್ ಆರ್. ಪೂಜಾರಿ ಹಾಗೂ ಕಾಂಗ್ರೆಸ್ ಮುಖಂಡರು ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಚೆಂಡೆ ವಾದ್ಯ ಮೇಳಗಳೊಂದಿಗೆ ರೋಡ್ ಶೋ ನಡೆಯಿತು.ಹಳೆಗೇಟು ಪೆಟ್ರೋಲ್ ಪಂಪ್ ಬಳಿಯಿಂದ ಆರಂಭಗೊಂಡ ರೋಡ್ ಶೋ ನಗರದಲ್ಲಿ ಪ್ರಯಾಣಿಸಿ ಮತ ಯಾಚನೆ ನಡೆಸಿದರು.ಬಸ್ ನಿಲ್ದಾಣದ ಮೂಲಕ ಮುಖ್ಯ ರಸ್ತೆಯಲ್ಲಿ ಹಾದು ಬಂದ ರೋಡ್ ಶೋ ಗಾಂಧಿನಗರ ತನಕ ನಡೆಯಿತು.
ಪಾದಯಾತ್ರೆಯ ಮೂಲಕ ವಾಹನಗಳಲ್ಲಿ ಕಾರ್ಯಕರ್ತರು, ನಾಯಕರು ರೋಡ್ ಶೋದಲ್ಲಿ ಭಾಗವಹಿಸಿದರು.
ಡಿಸಿಸಿ ಅಧ್ಯಕ್ಷ ಕೆ.ಹರೀಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಸಿ.ಜಯರಾಮ, ವಿಧಾನಸಭಾ ಚುನಾವಣಾ ಅಭ್ಯರ್ಥಿ ಜಿ.ಕೃಷ್ಣಪ್ಪ, ಶಕುಂತಳಾ ಶೆಟ್ಟಿ, ಎಂ.ಎಸ್.ಮಹಮ್ಮದ್ ತೆರೆದ ವಾಹನದಲ್ಲಿ ಅಭ್ಯರ್ಥಿ ಪದ್ಮರಾಜ್ ಜೊತೆಯಲ್ಲಿದ್ದರು.
ಮುಖಂಡರಾದ ಟಿ.ಎಂ.ಶಹೀದ್ ತೆಕ್ಕಿಲ್, ಧನಂಜಯ ಅಡ್ಪಂಗಾಯ, ಭರತ್ ಮುಂಡೋಡಿ, ಎನ್.ಜಯಪ್ರಕಾಶ್ ರೈ, ಅಧ್ಯಕ್ಷ ಸದಾನಂದ ಮಾವಜಿ, ಎಂ.ವೆಂಕಪ್ಪ ಗೌಡ, ಸರಸ್ವತಿ ಕಾಮತ್, ಎಸ್.ಸಂಶುದ್ದೀನ್,ರಾಧಾಕೃಷ್ಣ ಬೊಳ್ಳೂರು, ಶಾಹುಲ್ ಹಮೀದ್ ಕುತ್ತಮೊಟ್ಟೆ, ಕೆ.ಎಂ.ಮುಸ್ತಫ, ಪಿ.ಎಸ್.ಗಂಗಾಧರ, ರಾಜೀವಿ ರೈ, ಗೀತಾ ಕೋಲ್ಚಾರ್, ಬೆಟ್ಟ ರಾಜಾರಾಮ್ ಭಟ್, ಬೆಟ್ಟ ಜಯರಾಮ ಭಟ್, ಇಕ್ಬಾಲ್ ಎಲಿಮಲೆ, ಕೆ.ಎಸ್.ಉಮ್ಮರ್,ಕಿರಣ್ ಬುಡ್ಲೆಗುಡ್ಡೆ, ಗೋಕುಲ್ದಾಸ್, ರಹೀಂ ಬೀಜದಕಟ್ಟೆ,ಮೂಸಾ ಪೈಂಬೆಚ್ಚಾಲ್, ಪಿ.ಎ.ಮಹಮ್ಮದ್, ಶಾಫಿ ಕುತ್ತಮೊಟ್ಟೆ, ಸಿದ್ದಿಕ್ ಕೊಕ್ಕೊ, ಶರೀಫ್ ಕಂಠಿ, ರಂಜಿತ್ ರೈ ಮೇನಾಲ,ಅಬೂಬಕ್ಕರ್ ಅಡ್ಕಾರ್, ಮತ್ತಿತರರು ಉಪಸ್ಥಿತರಿದ್ದರು.