ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ನಿರೀಕ್ಷೆ ಇದೆ. ರಾಜ್ಯದ
ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ, ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರಗಿ, ವಿಜಯಪುರ, ಯಾದಗಿರಿ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ಮೈಸೂರು, ರಾಮನಗರ, ತುಮಕೂರಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ.ಬೆಂಗಳೂರಿನಲ್ಲಿ ಮೋಡಕವಿದ ವಾತಾವರಣವಿರಲಿದೆ.
ದಕ್ಷಿಣ ಕನ್ನಡ ಜಿಲ್ಲೆ ಸೇರಿ ರಾಜ್ಯದ ವಿವಿಧ ಭಾಗಗಳಲ್ಲಿ ಗುರುವಾರ ಮಳೆಯಾಗಿದೆ.ಸುಳ್ಯ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಗುರುವಾರ ರಾತ್ರಿ ಮಳೆಯಾಗಿದೆ. ಸುಳ್ಯ ನಗರದ ಹಳೆಗೇಟು, ಗಾಂಧಿನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಕೆಲ ಹೊತ್ತು ಹನಿ ಮಳೆ ಸುರಿದಿದೆ. ಅದರಂತೆ ಸುಳ್ಯ ಹಾಗೂ ಕಡಬ ತಾಲೂಕಿನ ವಿವಿಧ ಭಾಗಗಳು ಸೇರಿ ಜಿಲ್ಲೆಯ ವಿವಿಧ ಕಡೆ ಮಳೆಯಾಗಿದೆ. ಕೆಲವೆಡೆ ಹನಿ ಮಳೆಯಾದರೆ, ಕೆಲವೆಡೆ ಸಾಧಾರಣ ಮಳೆಯಾಗಿರುವ ಬಗ್ಗೆ ವರದಿಯಿದೆ.
ಮಡಪ್ಪಾಡಿಯಲ್ಲಿ ಉತ್ತಮ ಮಳೆಯಾಗಿದ್ದು 15 ಮಿಮೀ ಮಳೆಯಾಗಿದೆ. ಸುಳ್ಯ, ಕಲ್ಲಾಜೆ, ಸುಬ್ರಹ್ಮಣ್ಯ,ಬಳ್ಫ, ಎಣ್ಮೂರು, ಉಬರಡ್ಕ, ಮರ್ಕಂಜ, ಕರಿಕ್ಕಳ, ಕಾಣಿಯೂರು ,ಕಡಬ ಮತ್ತಿತರ ಕಡೆಗಳಲ್ಲಿ ಹನಿ ಮಳೆಯಾಗಿದೆ. ಸರ್ವೆ,ಕೇನ್ಯ ಧರ್ಮಸ್ಥಳ , ಕೊಕ್ಕಡ,ಉರುವಾಲು ,ನೆಲ್ಯಾಡಿ ಸಾಧಾರಣ ಮಳೆ ಸುರಿದಿದೆ.ಪುತ್ತೂರು,ಕೆದಿಲ,ನರಿಮೊಗರು ಸಣ್ಣ ಮಳೆಯಾಗಿದೆ. ವಿರಾಜಪೇಟೆ,ಕಳಸ, ಕೊಪ್ಪ, ತೀರ್ಥಹಳ್ಳಿ, ಹೋಸನಗರ,ಸಾಗರ, ಉತ್ತಮ ಮಳೆಯಾಗಿದೆ ಎಂದು ವರದಿಯಾಗಿದೆ.