ಬೆಂಗಳೂರು: ಡಿ.ಕೆ.ಶಿವಕುಮಾರ್ ನೇತೃತ್ವದ ಸರ್ಕಾರದ ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದೆ.ಜುಲೈ 3ರಂದು ಸಂಪುಟ ವಿಸ್ತರಣೆ ಆಗಿತ್ತು.ಶಿವಕುಮಾರ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಮೊದಲ ಅಧಿವೇಶನ ಇಂದಿನಿಂದ ಆರಂಭವಾಗಲಿದೆ. ಈ ಮಧ್ಯೆ ವಿಧಾನಸಭೆ ಉಪಸಭಾಧ್ಯಕ್ಷ ಸ್ಥಾನದ
ಅಭ್ಯರ್ಥಿಯಾಗಿ ಎ.ಎಸ್. ಪೊನ್ನಣ್ಣ ಅವರ ಹೆಸರನ್ನು ಕಾಂಗ್ರೆಸ್ ಘೋಷಿಸಿತ್ತು. ಇದೀಗ ಅವರಿಗೆ ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಹುದ್ದೆ ನೀಡಿ ಆದೇಶ ಹೊರಡಿಸಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮುಖ್ಯಮಂತ್ರಿಯ ಕಾನೂನು ಸಲಹೆಗಾರರಾಗಿದ್ದ ಪೊನ್ನಣ್ಣ, ಸಚಿವ ಸ್ಥಾನದ ನಿರೀಕ್ಷೆಯಲ್ಲಿದ್ದರು.
ಯಾರಿಗೆ ಯಾವ ಖಾತೆ?
ಡಿ.ಕೆ. ಶಿವಕುಮಾರ್ (ಮುಖ್ಯಮಂತ್ರಿ);ಹಣಕಾಸು, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ, ಗುಪ್ತಚರ, ಕಾನೂನು ಮತ್ತು ಸಂಸದೀಯ ವ್ಯವಹಾರ ಹಾಗೂ ಹಂಚಿಕೆಯಾಗದ ಖಾತೆಗಳು
ಬಿ. ಝೆಡ್. ಜಮೀರ್ ಅಹಮದ್ ಖಾನ್;ವಸತಿ
ರಾಮಲಿಂಗಾ ರೆಡ್ಡಿ;ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ
ಲಕ್ಷ್ಮಣ ಸವದಿ; ಸಹಕಾರ (ಕೃಷಿ ಮಾರುಕಟ್ಟೆ ಹೊರತುಪಡಿಸಿ)
ರುದ್ರಪ್ಪ ಲಮಾಣಿ; ಸಕ್ಕರೆ ಮತ್ತು ಜವಳಿ
ಕೆ.ಎಚ್. ಮುನಿಯಪ್ಪ; ಸಮಾಜ ಕಲ್ಯಾಣ
ಶಿವರಾಜ್ ತಂಗಡಗಿ; ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸ್ಕೃತಿ
ಯು.ಟಿ. ಖಾದರ್; ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಟಿ. ರಘುಮೂರ್ತಿ: ಪರಿಶಿಷ್ಟ ಪಂಗಡಗಳ ಕಲ್ಯಾಣ
ಡಾ. ಅಜಯ್ ಸಿಂಗ್: ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ
ಎನ್. ಚಲುವರಾಯಸ್ವಾಮಿ: ಜಲಸಂಪನ್ಮೂಲ
ಮಧು ಬಂಗಾರಪ್ಪ: ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ
ಬಸವರಾಜ ರಾಯರಡ್ಡಿ: ಉನ್ನತ ಶಿಕ್ಷಣ
ಕೆ.ಎಂ. ಶಿವಲಿಂಗೇಗೌಡ; ಅಬಕಾರಿ
ಸಿ. ಪುಟ್ಟರಂಗಶೆಟ್ಟಿ; ಪಶುಸಂಗೋಪನೆ ಮತ್ತು ರೇಷ್ಮೆ
ವಿಜಯಾನಂದ ಕಾಶಪ್ಪನವರ: ಸಣ್ಣ ಕೈಗಾರಿಕೆ, ಸಾರ್ವಜನಿಕ ಉದ್ದಿಮೆಗಳು
ಸಂತೋಷ್ ಲಾಡ್: ಕಾರ್ಮಿಕ ಮತ್ತು ಉದ್ಯೋಗ
ಕೆ.ಎಸ್. ಬಸವಂತಪ್ಪ: ಮುಜರಾಯಿ, ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ
ಎಸ್.ಎಸ್. ಮಲ್ಲಿಕಾರ್ಜುನ: ಗಣಿ ಮತ್ತು ಭೂವಿಜ್ಞಾನ, ತೋಟಗಾರಿಕೆ
ರಿಜ್ವಾನ್ ಅರ್ಷದ್: ಆಹಾರ ಮತ್ತು ನಾಗರಿಕ ಸರಬರಾಜು
ಪಿ.ಎಂ. ನರೇಂದ್ರ ಸ್ವಾಮಿ: ಕೃಷಿ
ಎಚ್.ಸಿ. ಬಾಲಕೃಷ್ಣ: ಪೌರಾಡಳಿತ
ಬಿ. ನಾಗೇಂದ್ರ: ಯೋಜನೆ ಮತ್ತು ಸಾಂಖ್ಯಿಕ





































