ಸುಳ್ಯ:ಸುಳ್ಯ ತಾಲೂಕು ಧ್ವನಿ ಬೆಳಕು,ಶಾಮಿಯಾನ ಮಾಲಕರ ಸಂಘದ ವತಿಯಿಂದ ಅಮೆಚೂರು ಕಬಡ್ಡಿ ಫೆಡರೇಶನ್ ಅಫ್ ಇಂಡಿಯಾ ಇದರ ನಿಯಮಾವಳಿಗಳಂತೆ ಶಾಮಿಯಾನ ಸಂಘದ 12ನೇ ವಾರ್ಷಿಕೋತ್ಸವದ ಅಂಗವಾಗಿ ಸುಳ್ಯ ಕಬಡ್ಡಿ ಉತ್ಸವ 2026 ರಾಷ್ಟ್ರೀಯ ಎ ಗ್ರೇಡ್ ಕಬಡ್ಡಿ ಪಂದ್ಯಾಟ ಸುಳ್ಯದ
ಜೂನಿಯರ್ ಕಾಲೇಜು ಮೈದಾನದಲ್ಲಿ ಅ.3ಮತ್ತು 4 ರಂದು ನಡೆಯಲಿದೆ.ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮ ಕಬಡ್ಡಿ ಉತ್ಸವ ಮೈದಾನದಲ್ಲಿ ಸೆ.26ರಂದು ನಡೆಯಿತು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ವೆಂಕಟ್ ವಳಲಂಬೆ, ಹರೀಶ್ ಕಂಜಿಪಿಲಿ, ವೆಂಕಟ್ ದಂಬೆಕೋಡಿ, ವಿನಯಕುಮಾರ್ ಕಂದಡ್ಕ,
ಧ್ವನಿ ಬೆಳಕು,ಶಾಮಿಯಾನ ಸಂಘದ ಅಧ್ಯಕ್ಷ ಸಂಶುದ್ದೀನ್ ಜಿ.ಪಿ., ಗೌರವಾಧ್ಯಕ್ಷ ಎಸ್. ಪಿ. ಲೋಕನಾಥ್, ಮಾಜಿ ಅಧ್ಯಕ್ಷ ಶಿವಪ್ರಕಾಶ್, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಕೋಶಾಧಿಕಾರಿ ಶಾಫಿ ಪ್ರಗತಿ ಪೈಚಾರು, ಸದಸ್ಯರಾದ ಗುರುದತ್ ನಾಯಕ್, ಜಿ.ಮಹಮ್ಮದ್, ಚಂದ್ರಶೇಖರ ಪಂಜ,ಅಬ್ದುಲ್ ರಜಾಕ್, ಉಪಸ್ಥಿತರಿದ್ದರು
ರಾಷ್ಟ್ರೀಯ ಮಟ್ಟದ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಾಟದಲ್ಲಿ ರಾಷ್ಟ್ರೀಯ ಮಟ್ಟದ 12 ಪುರುಷರ ತಂಡಗಳು ಭಾಗವಹಿಸಲಿದೆ. ಕ್ರೀಡಾಂಗಣದಲ್ಲಿ ಸುಮಾರು 3000 ಸಾವಿರ ಮಂದಿ ಕುಳಿತುಕೊಂಡು ಪಂದ್ಯಾಾಟವನ್ನು ವೀಕ್ಷಿಸಲು ವ್ಯವಸ್ಥಿತ ಗ್ಯಾಾಲರಿ ನಿರ್ಮಾಣ ಮಾಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.








