ತಿರುವನಂತಪುರಂ:ಕೇರಳಂ ರಾಜ್ಯದ ತಿರುವೋಣಂ ಬಂಪರ್ ಲಾಟರಿ -2026 ಫಲಿತಾಂಶ ಪ್ರಕಟಗೊಂಡಿದೆ. ರಾಜ್ಯ ಇತಿಹಾಸದ ಅತ್ಯಧಿಕ ಬಹುಮಾನ ಮೊತ್ತವಾದ 30 ಕೋಟಿ ರೂಗಳ ಪ್ರಥಮ ಬಹುಮಾನವು TL 360615 ಎಂಬ ನಂಬರಿನ ಟಿಕೆಟಿಗೆ ಒಲಿದಿದೆ. ಈ ಟಿಕೆಟ್ ಕಣ್ಣೂರಿನ
ಚಕ್ಕರಕಲ್ಲಿಲ್ ಎಂಬಲ್ಲಿ ಮಾರಾಟವಾದ ಟಿಕೆಟ್ ಎನ್ನಲಾಗಿದ್ದು, ಅದೃಷ್ಟ ಶಾಲಿಯ ಶೋಧ ನಡೆದಿದೆ.ತಲಾ 1 ಕೋಟಿ ರೂ ಗಳಂತೆ 20 ಮಂದಿಗೆ ದ್ವಿತೀಯ ಬಹುಮಾನ, ತೃತೀಯ ಬಹುಮಾನ ತಲಾ 25 ಲಕ್ಷ 20 ಮಂದಿಗೆ ಸೇರಿ ವಿವಿಧ ಹಂತಗಳಲ್ಲಿ125 ಕೋಟಿ ಮೊತ್ತದ ಬಹುಮಾನ ನೀಡಲಾಗುತ್ತದೆ. ಈ ಬಾರಿ ಪ್ರಥಮ ಬಹುಮಾತ 30 ಕೋಟಿ ಬಹುಮಾನ ನೀಡಲಿದ್ದು 500 ರೂ. ಮುಖಬೆಲೆಯ 90 ಲಕ್ಷ ಟಿಕೆಟ್ಗಳು ಮಾರಾಟವಾಗಿತ್ತು.








