ನಾಗೋಯಾ:ಏಷ್ಯನ್ ಗೇಮ್ಸ್ ಕಬಡ್ಡಿ ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಚಿನ್ನದ ಪದಕ ಪಡೆದುಕೊಂಡಿದೆ. ಇರಾನ್ ತಂಡಗಳನ್ನು ಶನಿವಾರ ಸೋಲಿಸಿ ಚಿನ್ನದ ಪದಕಗಳನ್ನು ಗೆದ್ದುಕೊಂಡವು.ಪುರುಷರ ತಂಡವು
40–34 ರಿಂದ ಜಯಗಳಿಸಿದರೆ, ಮಹಿಳಾ ತಂಡವು 37–34 ರಿಂದ ಜಯಗಳಿಸಿ ಪ್ರಾಬಲ್ಯ ಮುಂದುವರಿಸಿದವು. ಪುರುಷರ ತಂಡಕ್ಕೆ ಇದು ಕಬಡ್ಡಿಯಲ್ಲಿ ಒಂಬತ್ತನೇ ಚಿನ್ನ. ಮಹಿಳೆಯರಿಗೆ ನಾಲ್ಕನೇಯದ್ದು.
ಏಷ್ಯನ್ ಗೇಮ್ಸ್ ಶೂಟಿಂಗ್ನ ಮಹಿಳೆಯರ 50 ಮೀಟರ್ ರೈಫಲ್ 3 ಪೊಸಿಷನ್ಸ್ ಸ್ಪರ್ಧೆಯಲ್ಲಿ .ತಿಲೋತ್ತಮಾ ಸೇನ್, ವಿದರ್ಶಾ ವಿನೋದ್ ಮತ್ತು ಆಶಿ ಚೋಸ್ಕಿ ಅವರನ್ನು ಒಳಗೊಂಡ ಭಾರತ ತಂಡವು ಬೆಳ್ಳಿ ಪದಕ ಗೆದ್ದುಕೊಂಡಿತು.ಭಾರತ ತಂಡ ಒಟ್ಟು 1763 ಪಾಯಿಂಟ್ಸ್ ಕಲೆಹಾಕಿತು. 1773 ಪಾಯಿಂಟ್ಸ್ ಸಂಗ್ರಹಿಸಿ ಕ್ರೀಡೆಗಳ ದಾಖಲೆ ಸ್ಥಾಪಿಸಿದ ಇರಾನ್ ತಂಡ ಚಿನ್ನದ ಪದಕ ತನ್ನದಾಗಿಸಿಕೊಂಡಿತು.ತಿಲೋತ್ತಮಾ ಮತ್ತು ವಿದರ್ಶ ಅವರು ಶೂಟಿಂಗ್ನಲ್ಲಿ ತಲಾ ಎರಡು ಪದಕಗಳನ್ನು ಗಳಿಸಿದ್ದಾರೆ.
ಕನ್ನಡತಿ ಜೋಷ್ನಾ ಚಿಣ್ಣಪ್ಪ ಮತ್ತು ವೆಳವನ್ ಸೆಂಥಿಲ್ಕುಮಾರ್ ಜೋಡಿ ಏಷ್ಯನ್ ಕ್ರೀಡಾಕೂಟದ ಸ್ಕ್ವಾಷ್ ಮಿಶ್ರ ಡಬಲ್ಸ್ನಲ್ಲಿ ಕಂಚಿನ ಪದಕಕ್ಕೆ ಕೊರಳೊಡ್ಡಿತು.ಭಾರತದ ಜೋಡಿ ರೋಚಕ ಸೆಮಿಫೈನಲ್ ಹಣಾಹಣಿಯಲ್ಲಿ 10–11, 11–2, 10–11ರಿಂದ ಹಾಂಗ್ಕಾಂಗ್ನ ತಾಂಗ್ ಮಿಂಗ್– ಲೀ ಕಾ ಯಿ ಎದುರು ಪರಾಭವಗೊಂಡಿತು. ಜೋಷ್ನಾ ಅವರು ದಾಖಲೆಯ ಏಳನೇ ಬಾರಿ ಈ ಕೂಟದಲ್ಲಿ ಕಣಕ್ಕಿಳಿದಿದ್ದರು.








