ಸುಳ್ಯ:ತಾಯಿಯ ಹೆಸರಿನಲ್ಲಿ ಒಂದು ಗಿಡ ನೆಡುವ ವಿಶೇಷ ಕಾರ್ಯಕ್ರಮ ಸುಳ್ಯದಲ್ಲಿ ನಡೆಯಿತು.ಸುಳ್ಯದ ಹಳೆಗೇಟ್ ಬೂತಿನ ಛತ್ರಪತಿ ನಗರದ ಶಂಕರ ರಾವ್ ಅವರ ಮನೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಗಿಡ ನೆಡುವ ಮೂಲಕ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಚಾಲನೆ ನೀಡಿದರು. ಬಿಜೆಪಿ ಮಂಡಲ ಸಮಿತಿ
ಅಧ್ಯಕ್ಷ ವೆಂಕಟ್ ವಲಳಂಬೆ,ಮಾಜಿ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ,ವೆಂಕಟ್ ದಂಬೇಕೋಡಿ,ಸುಳ್ಯ ನಗರ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ. ಟಿ, ಮಂಡಲ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಮಹಾಶಕ್ತಿ ಕೇಂದ್ರದ ಕಾರ್ಯದರ್ಶಿ ನಾರಾಯಣ ಎಸ್.ಎಂ.ಶಕ್ತಿ ಕೇಂದ್ರದ ಪ್ರಮುಖ ರಮೇಶ್, ನಗರ ಟೋಳಿ ಸದಸ್ಯ ಶಿವನಾಥ್ ರಾವ್, ಬೂತ್ ಅಧ್ಯಕ್ಷ ಶ್ರೀನಿವಾಸ ಮಾಸ್ಟರ್, ಕಾರ್ಯದರ್ಶಿ ಚಿದಾನಂದ ವಿದ್ಯಾನಗರ, ನ.ಪಂ. ಮಾಜಿ ಅಧ್ಯಕ್ಷೆ ಶಶಿಕಲಾ.ಎ. ಮಾಜಿ ನ.ಪಂ. ಉಪಾಧ್ಯಕ್ಷ ಬುದ್ಧ ನಾಯ್ಕ್, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪುಷ್ಪ ಮೇದಪ್ಪ, ಭಾರತಿ ಪುರುಷೋತಮ, ಸುದರ್ಶನ್ ಪಾತಿಕಲ್ಲು, ಶಂಕರ ರಾವ್, ಸಚಿನ್, ಕಿಶನ್, ಗೌತಮ್, ಪೂರ್ಣಿಮಾ, ಶೋಭಾ, ಸಿಂಧೂರ, ಕೇಶವ ಮಾಸ್ಟರ್ ಹೊಸಗದ್ದೆ,ಸಂತೋಷ್ ಕುತ್ತಮೊಟ್ಟೆ ಮತ್ತಿತರರು ಉಪಸ್ಥಿತರಿದ್ದರು.








