ಸುಳ್ಯ:ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಸುಳ್ಯ ತಾಲೂಕಿನ ಸಾಹಿತಿಗಳ ಮತ್ತು ಸಾಧಕರ ಪರಿಚಯ ಮಾಲಿಕೆಯಲ್ಲಿ ಪ್ರಕಟಗೊಳ್ಳುತ್ತಿರುವ ಕೃತಿ ಬಿಡುಗಡೆ ಸಮಾರಂಭ ನ.23 ರಂದು ಪೂ. 11:30ಕ್ಕೆ ಸುಳ್ಯದ ಕನ್ನಡ ಭವನದಲ್ಲಿ ನಡೆಯಲಿದೆ. ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಲ್ಲಿದ್ದಾರೆ. ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದ ಅವರು ಕೃತಿ ಬಿಡುಗಡೆ ಮಾಡಲಿದ್ದಾರೆ.ಕಾರ್ಯಕ್ರಮದಲ್ಲಿ ಎಂಟು ಸಾಹಿತ್ಯ ಕೃತಿ ಹಾಗೂ ಮೂರು ಸಾಧಕರ ಕುರಿತ ಕೃತಿಗಳು ಬಿಡುಗಡೆಗೊಳ್ಳಲಿದೆ.
ಪ್ರಗತಿ ಶೀಲ ಬರಹಗಾರ ನಿರಂಜನ,ಸಾಹಿತ್ಯ ಲೋಕದ ಸವ್ಯಸಾಚಿ ಟಿ.ಜಿ. ಮುಡೂರು, ಸುಮನಸ್ಸಿನ ಪರಿಸರ ಕವಿ ಜಿ. ಎಸ್ ಉಬರಡ್ಕ, ಚೊಕ್ಕಾಡಿಯ ಸಿರಿ ಪಾರಿಜಾತ ಸುಬ್ರಾಯ ಚೊಕ್ಕಾಡಿ,ಪರಿಸರ ಕವಿ ಕುತ್ಯಾಳ ನಾಗಪ್ಪ ಗೌಡ (ಕಿರಣ), ಬಹುಮುಖ ಪ್ರತಿಭೆಯ ವಿಶಿಷ್ಟ ಚಿಂತಕ ಡಾ.ಪ್ರಭಾಕರ ಶಿಶಿಲ, ಜೀವನ್ಮುಖಿ ಅಮ್ಮ ಎಂ.ಜಿ ಕಾವೇರಮ್ಮ, ಹಳಬರ ಜೋಳಿಗೆಯ ಜಯಮ್ಮ ಚಟ್ಟಿಮಾಡ ಕೃತಿಗಳು ಹಾಗು ಸುಳ್ಯ ತಾಲೂಕಿನ ಸಾಧಕರ ಪರಿಚಯ ಮಾಲಿಕೆಯಲ್ಲಿ, ವೈದ್ಯಕೀಯ ಕ್ಷೇತ್ರದ ಮೇರು ಸಾಧಕ ಡಾ. ಕೆ.ವಿ. ಚಿದಾನಂದ, ತೂಗು ಸೇತುವೆಗಳ ಸರದಾರ ಡಾ. ಗಿರೀಶ್ ಭಾರದ್ವಾಜ್, ಸಾಹಿತ್ಯದ ಸಾರಥಿ ಎಂ. ಮೀನಾಕ್ಷಿ ಗೌಡ ಕೃತಿಗಳು ಪ್ರಕಟಗೊಳ್ಳಲಿದೆ ಎಂದು ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
















