ಸುಳ್ಯ:ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್, ಸುಳ್ಯ ಪೊಲೀಸ್ ಠಾಣೆ, ಪ್ರೆಸ್ ಕ್ಲಬ್ ಸುಳ್ಯ, ಸರಕಾರಿ ಪದವಿಪೂರ್ವ ಕಾಲೇಜು ಸುಳ್ಯ, ಸಂಕೇಶ್ ಫೌಂಡೇಶನ್ ಸುಳ್ಯ ಹಾಗು ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಅಂತಾರಾಷ್ಟ್ರೀಯ ಮಾದಕ ವ್ಯಸನ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮ ಸುಳ್ಯದಲ್ಲಿ ನಡೆಯಿತು. ದಿನಾಚರಣೆಯ ಅಂಗವಾಗಿ
ನಗರದಲ್ಲಿ ಜಾಗೃತಿ ಜಾಥಾ ನಡೆಯಿತು. ಜ್ಯೋತಿ ವೃತ್ತದಿಂದ ಆರಂಭಗೊಂಡ ಜಾಥಾ ಗಾಂಧಿನಗರ ತನಕ ಸಾಗಿ ಅಲ್ಲಿಂದ ಹಿಂತಿರುಗಿ ಪೊಲೀಸ್ ಠಾಣೆಯಲ್ಲಿ ಸಮಾಪನಗೊಂಡಿತು. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳು, ಪತ್ರಕರ್ತರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ವಿದ್ಯಾರ್ಥಿಗಳು, ಸಾರ್ವಜನಿಕರು ಜಾಥಾದಲ್ಲಿ ಪಾಲ್ಗೊಂಡರು.
ಜ್ಯೋತಿ ವೃತ್ತದಿಂದ ಆರಂಭಗೊಂಡ ಜಾಥಾಕ್ಕೆ ಪೊಲೀಸ್ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ವಕೀಲರ ಸಂಘದ ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಸಂಕೇಶ್ ಫೌಂಡೇಶನ್ನ ಅಧ್ಯಕ್ಷ ಅಬ್ದುಲ್ ರಹಿಮಾನ್ ಸಂಕೇಶ್ ಸೇರಿ ಚಾಲನೆ ನೀಡಿದರು. ಸುಳ್ಯ ಆರಕ್ಷಕ ಉಪನಿರೀಕ್ಷಕ ಸಂತೋಷ್ ಕುಮಾರ್ ಬಿ.ಪಿ, ಪ್ರೊಬೇಷನರಿ ಎಸ್ಐ ಕೃಷ್ಣ,ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ,ವರ್ತಕರ ಸಂಘದ ಗೌರವಾಧ್ಯಕ್ಷ

ಸುಧಾಕರ ರೈ.ಪಿ.ಬಿ, ಎಂಬಿ ಫೌಂಡೇಷನ್ನ ಅಧ್ಯಕ್ಷ ಎಂ.ಬಿ.ಸದಾಶಿವ, ರೋಟರಿ ಕ್ಲಬ್ ಅಧ್ಯಕ್ಷ ಡಾ.ರಾಮ್ ಮೋಹನ್, ನಿಯೋಜಿತ ಅಧ್ಯಕ್ಷೆ ಲತಾ ಮಧುಸೂದನ್, ಜೆಸಿಐ ಪಯಸ್ವಿನಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಕಾರ್ಯದರ್ಶಿ ತಾರಾ ಮಾಧವ, ಜೆಸಿಐ ಸುಳ್ಯ ಸಿಟಿ ಅಧ್ಯಕ್ಷೆ ನಾಗವೇಣಿ, ಮನಮೋಹನ ಬಳ್ಳಡ್ಕ, ವಕೀಲರ ಸಂಘದ ಪದಾಧಿಕಾರಿಗಳಾದ ಭಾಸ್ಕರ ರಾವ್, ಚಂದ್ರಶೇಖರ ಉದ್ದಂತ್ತಡ್ಕ, ಹರೀಶ್ ಬೂಡುಪನ್ನೆ, ದೇವಿಪ್ರಸಾದ್, ಸ್ವರ್ಣಂ ಜುವೆಲ್ಲರಿಯ ಪ್ರವೀಣ್, ಸಂಜೀವ, ಪ್ರಮುಖರಾದ ಮಧುಸೂದನ್ ಕುಂಭಕ್ಕೋಡು, ಇಬ್ರಾಹಿಂ ಸೀಫುಡ್, ಶಾರೀಖ್ ಡಿ.ಎಂ, ಸುಪ್ರಿತ್ ಮೋಂಟಡ್ಕ, ಪ್ರಭಾಕರನ್ ನಾಯರ್.ಸಿ.ಎಚ್, ಸತ್ಯಶಾಂತಿ ತ್ಯಾಗಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಹರೀಶ್ ಬಂಟ್ವಾಳ್ ಸ್ವಾಗತಿಸಿದರು.ಗಿರೀಶ್ ಕುಂಠಿನಿ ಉದ್ಘೋಷಕರಾಗಿದ್ದರು.ಸಮಾರೋಪ ಸಮಾರಂಭದಲ್ಲಿ

ಸಮಾರೋಪ ಸಮಾರಂಭದಲ್ಲಿ ವೃತ್ತ ನಿರೀಕ್ಷಕ ತಿಮ್ಮಪ್ಪ ನಾಯ್ಕ್, ಎಸ್ಐ ಸಂತೋಷ್ ಕುಮಾರ್ ಬಿ.ಪಿ.ಮಾತನಾಡಿದರು. ಪ್ರೊಬೇಷನರಿ ಎಸ್ಐ ಕೃಷ್ಣ ಮಾದಕ ದ್ರವ್ಯ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿ,ಜೊತೆ ಕಾರ್ಯದರ್ಶಿ ಹಸೈನಾರ್ ಜಯನಗರ ವಂದಿಸಿದರು.






