ಸುಳ್ಯ:ಸುಳ್ಯ ವಿಧಾನಸಭಾ ಕ್ಷೇತ್ರಕ್ಕೆ ಎಐಸಿಸಿ ಕಾರ್ಯದರ್ಶಿ ಹಾಗು ವಿಧಾನ ಪರಿಷತ್ ಸದಸ್ಯರಾದ ಪಿ.ವಿ. ಮೋಹನ್ ನ.21ರಂದು ಭೇಟಿ ನೀಡಿದರು.ಕ್ಷೇತ್ರದ ಗುತ್ತಿಗಾರು, ಸುಬ್ರಹ್ಮಣ್ಯ ಮತ್ತಿತರ ಕಡೆ ಭೇಟಿ ನೀಡಿ ಸಭೆ ನಡೆಸಿದರು. ಗುತ್ತಿಗಾರು ಜಿ.ಪಂ ವ್ಯಾಪ್ತಿಯ ಕಾಂಗ್ರೆಸ್ ಪದಾಧಿಕಾರಿಗಳ ಸಭೆ ನಡೆಸಿ ಪಕ್ಷ ಸಂಘಟನೆಗೆ ಮಾರ್ಗದರ್ಶನ ನೀಡಿದರು.ಸುಳ್ಯ ಬ್ಲಾಕ್ ಕಾಂಗ್ರೆಸ್
ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಅಧ್ಯಕ್ಷತೆ ವಹಿಸಿದ್ದರು.ಕೆಪಿಸಿಸಿ ಸದಸ್ಯ ಜಿ.ಕೃಷ್ಣಪ್ಪ, ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಪಿ.ಸಿ ಜಯರಾಮ, ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಪ್ರಮುಖರಾದ ಪೈಸಲ್ ಕಡಬ, ಕೇಶವ ಹೊಸೋಳಿಕೆ ವೇದಿಕೆಯಲ್ಲಿದ್ದರು. ಡಿ.ಜೆ ಜನಾರ್ದನ ಸ್ವಾಗತಿಸಿ, ಪ್ರವೀಣ್ ಮುಂಡೋಡಿ ವಂದಿಸಿದರು.ಭವಾನಿಶಂಕರ ಕಲ್ಮಡ್ಕ ಕಾರ್ಯಕ್ರಮ ನಿರೂಪಿಸಿದರು.
ಗುತ್ತಿಗಾರಿನ ಲಯನ್ಸ್ ಸಭಾಂಗಣ ನಡೆದ ಸಭೆಯಲ್ಲಿ ಗುತ್ತಿಗಾರು, ನಾಲ್ಕೂರು, ಹರಿಹರ ಪಲ್ಲತಡ್ಕ, ಬಾಳುಗೋಡು, ಕೊಲ್ಲಮೊಗ್ರು, ಕಲ್ಮಕಾರು, ಮಡಪ್ಪಾಡಿ, ದೇವಚಳ್ಳ, ನೆಲ್ಲೂರು ಕೆಮ್ರಾಜೆ, ಮರ್ಕಂಜ, ಉಬರಡ್ಕ ಮಿತ್ತೂರು, ಅರಂತೋಡು, ತೊಡಿಕಾನ, ಸಂಪಾಜೆ ಗ್ರಾಮಗಳ ಘಟಕಗಳ ಪದಾಧಿಕಾರಿಗಳು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು,
ಗ್ರಾಮ ಸಮಿತಿ, ಬೂತ್ ಸಮಿತಿ ಪದಾಧಿಕಾರಿಗಳು ಭಾಗವಹಿಸಿದ್ದರು.
















