ಸುಳ್ಯ:ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರೋಧಿಸಿ ಬಿಜೆಪಿ ಸುಳ್ಯ ಮಂಡಲದ ವತಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಶಾಸಕಿ ಭಾಗೀರಥಿ ಮುರುಳ್ಯ ಪೆಟ್ರೋಲ್, ಡೀಸಿಲ್ ಬೆಲೆ ಏರಿಸಿ ಜನ ಸಾಮಾನ್ಯರ ಜೇಬಿಗೆ ಕತ್ತರಿ ಹಾಕುವ ಕೆಲಸ ಮಾಡಿದೆ ಎಂದು ಹೇಳಿದರು. ತೈಲ ಬೆಲೆ ಏರಿಕೆಯಿಂದ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಲಿದೆ. ಪೆಟ್ರೋಲ್ ಡೀಸೆಲ್ ದರ ಏರಿಕೆ ಹಿಂಪಡೆಯದಿದ್ದರೆ ಬೀದಿಗಿಳಿದು ಹೋರಾಟ ನಡೆಸಲಾಗುವುದು ಎಂದು
ಅವರು ಹೇಳಿದರು. ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಮಾತನಾಡಿ’ ಜನರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸುತ್ತಿಲ್ಲ, ಅಭಿವೃದ್ಧಿ ಕೆಲಸಗಳು ಆಗುತ್ತಾ ಇಲ್ಲಾ. ಇದೀಗ ಪೆಟ್ರೋಲ್ ಡೀಸಿಲ್ ದರ ಏರಿ ಜನ ಸಾಮಾನ್ಯರ ಬದುಕಿಗೆ ಬರೆ ಎಳೆದಿದ್ದಾರೆ ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ ಮಾತನಾಡಿ ‘ರಾಜ್ಯ ಸರಕಾರ ಜನರ ಕೈಗೆ ಚೆಂಬನ್ನು ಕೊಟ್ಟಿದ್ದಾರೆ. ಬಿಟ್ಟಿ ಭಾಗ್ಯ ಈಗ ತುಟ್ಟಿಯಾಗಿದೆ ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಎ.ವಿ.ತೀರ್ಥರಾಮ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ಪ್ರದೀಪ್ ರೈ ಮನವಳಿಕೆ ಕಾರ್ಯಕ್ರಮ ನಿರೂಪಿಸಿದರು. ಯುವ ಮೋರ್ಚಾ ಅಧ್ಯಕ್ಷ ಶ್ರೀಕಾಂತ್ ಮಾವಿನಕಟ್ಟೆ ವಂದಿಸಿದರು.
ಮುಖಂಡರಾದ ಹರೀಶ್ ಕಂಜಿಪಿಲಿ, ಎ.ವಿ.ತೀರ್ಥರಾಮ, ಆಶಾ ತಿಮ್ಮಪ್ಪ ಸುಬೋದ್ ಶೆಟ್ಟಿ ಮೇನಾಲ, ಎ.ಟಿ.ಕುಸುಮಾಧರ, ಸುರೇಶ್ ಕಣೆಮರಡ್ಕ, ವಿಕ್ರಂ ಎ.ವಿ, ಚನಿಯ ಕಲ್ತಡ್ಕ, ಆರ್.ಕೆ.ಭಟ್ ಕುರುಂಬಡೇಲು, ಪ್ರದೀಪ್ ಕೊಲ್ಲರಮೂಲೆ, ಪುಲಸ್ಯ ರೈ, ಇಂದಿರಾ ಬಿ.ಕೆ, ಗುಣವತಿ ಕೊಲ್ಲಂತ್ತಡ್ಕ, ಪುಷ್ಪಾ ಮೇದಪ್ಪ, ತೇಜಸ್ವಿನಿ ಕಟ್ಟಪುಣಿ, ಶಂಕರ ಪೆರಾಜೆ, ಭಾರತಿ ಉಳುವಾರು, ಜಯರಾಮ ರೈ ಜಾಲ್ಸೂರು, ಜಯರಾಜ್ ಕುಕ್ಕೆಟ್ಟಿ, ಕೇಶವ ಅಡ್ತಲೆ, ಶಿವಮಾಥ್ ರಾವ್, ಸುನಿಲ್ ಕೇರ್ಪಳ, ಶ್ರೀಕೃಷ್ಣ ಎಂ.ಆರ್. ವಿಜಯ್ ಆಲಡ್ಕ, ಸತೀಶ್ ನಾಯ್ಕ್, ಚಂದ್ರ ಕೋಲ್ಚಾರ್, ಉಮೇಶ್.ಪಿ.ಕೆ, ಚಂದ್ರಶೇಖರ ಅಡ್ಪಂಗಾಯ, ಜಿನ್ನಪ್ಪ ಪೂಜಾರಿ, ಬೂಡು ರಾಧಾಕೃಷ್ಣ ರೈ, ಗುರುದತ್ ನಾಯಕ್, ದಯಾನಂದ ಕುರುಂಜಿ, ಜಯಪ್ರಕಾಶ್ ಕುಂಚಡ್ಕ, ಶಿವಾನಂದ ಕುಕ್ಕುಂಬಳ, ಬುದ್ಧ ನಾಯ್ಕ್, ಶಿಲ್ಪಾ ಸುದೇಶ್, ಶಶಿಕಲಾ ನೀರಬಿದಿರೆ, ಕಿಶೋರಿ ಶೇಟ್, ಶೀಲಾ ಅರುಣ ಕುರುಂಜಿ, ಬಾಲಗೋಪಾಲ ಸೇರ್ಕಜೆ, ದಯಾನಂದ ಕೇರ್ಪಳ, ಪ್ರವಿತಾ ಪ್ರಶಾಂತ್, ಶೀನಪ್ಪ ಬಯಂಬು, ಪ್ರಸಾದ್ ಕಾಟೂರು,ನಿಕೇಶ್ ಉಬರಡ್ಕ, ಚಿದಾನಂದ ಕಾಯರ್ತೋಡಿ, ಅನೂಪ್ ಬಿಳಿಮಲೆ, ಸುಪ್ರಿತ್ ಮೋಂಟಡ್ಕ, ಜಗನ್ನಾಥ ಜಯನಗರ, ಸುಧಾಕರ ಕುರುಂಜಿಭಾಗ್, ಶಿವರಾಮ ಕೇರ್ಪಳ, ಆನಂದ ಬೆಟ್ಟಂಪಾಡಿ, ಗಿರೀಶ್ ಕುಂಠಿನಿ, ಶಿವಪ್ರಸಾದ್ ನಡುತೋಟ, ಕೇಶವ ಮಾಸ್ತರ್, ಅಶೋಕ್ ಅಡ್ಕಾರ್, ತನುದೀಪ್ ಪೆಲ್ತಡ್ಕ, ಹರ್ಷಿತ್ ಕಾರ್ಜ, ಹೇಮಂತ ಮಠ, ಸತೀಶ್ ಕೆ.ಜಿ., ಕುಸುಮಾಧರ ಆಲಡ್ಕ, ರಾಜೇಶ್ ಕಿರಿಭಾಗ, ಸತೀಶ್ ಕೆಮನಬಳ್ಳಿ,
ನವ್ಯಾ ಚಂದ್ರಶೇಖರ, ಬಾಲಕೃಷ್ಣ ಬಾಣಜಾಲು, ರಾಮಕೃಷ್ಣ ರೈ ಪಿ.ಜಿ, ಚಂದ್ರಜಿತ್ ಮಾವಂಜಿ, ಸುದರ್ಶನ ಪಾತಿಕಲ್ಲು, ಅವಿನಾಶ್ ಕುರುಂಜಿ, ರಂಜಿತ್, ಶಂಕರಲಿಂಗಂ ತೊಡಿಕಾನ, ಲತೀಶ್ ಗುಂಡ್ಯ, ಪ್ರಬೋದ್ ರೈ ಮೇನಾಲ, ಸುನಿಲ್ ರೈ ಮೇನಾಲ, ರಮೇಶ್ ಶೆಟ್ಟಿ ನೆಲ್ಯಾಡಿ, ರವಿಪ್ರಸಾದ್ ಶೆಟ್ಟಿ ಬಲ್ಯ, ವಿಜಯ ಚಾರ್ಮಾತ ಮತ್ತಿತರರು ಉಪಸ್ಥಿತರಿದ್ದರು.