ಬೆಳ್ಳಾರೆ:ಐತಿಹಾಸಿಕ ಸ್ಥಳವಾದ ಬೆಳ್ಳಾರೆ ಬಂಗ್ಲೆಗುಡ್ಡೆಯಲ್ಲಿ ಸ್ವಾತಂತ್ರ್ಯೋತ್ಸವ ಆಚರಣೆ ನಡೆಸುವ ಬಗ್ಗೆ ಪೂರ್ವಭಾವಿ ಸಭೆಯು ಬೆಳ್ಳಾರೆ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಸ್ವಾತಂತ್ರ್ಯೋತ್ಸವದ ರೂಪುರೇಷೆಗಳನ್ನು ತಯಾರಿಸಲಾಯಿತು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ, ಗ್ರಾಮ ಪಂಚಾಯತ್
ಅಭಿವೃದ್ಧಿ ಅಧಿಕಾರಿ ಪ್ರವೀಣ್,ಪ್ರಮುಖರಾದ ಚಂದ್ರ ಕೋಲ್ಚಾರ್, ಬೆಳ್ಳಾರೆ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾರ ಸುರೇಶ್ ರೈ, ಪದ್ಮನಾಭ ಬೀಡು, ಮಹಾಬಲ , ಕೂಸಪ್ಪ ಗೌಡ ಮುಗುಪ್ಪು, ಜೈಪ್ರಸಾದ್, ವಸಂತ ಪಡ್ಪು, ರವೀಂದ್ರ ಗೌಡ, ಬೆಳ್ಳಾರೆ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಮಾಯಿಲಪ್ಪ, ಪ್ರಾಂಶುಪಾಲರಾದ ಉಮಾಕುಮಾರಿ, ಜಯರಾಮ ಉಮಿಕಳ, ಸಂಜೀವಿನಿ ಸಂಘದ ಪದಾಧಿಕಾರಿಗಳಾದ ಗೀತ ಪ್ರೇಮ್, ಲೀಲಾ, ದಿವ್ಯ ಆನಂದ್, ಪ್ರೇಮ್ ಬೆಳ್ಳಾರೆ, ಮತ್ತಿತರರು ಉಪಸ್ಥಿತರಿದ್ದರು. ಆಗಸ್ಟ್ 15 ರಂದು ಬೆಳಿಗ್ಗೆ 8:15ಕ್ಕೆ ಗ್ರಾಮ ಪಂಚಾಯಿತಿನಲ್ಲಿ ಮತ್ತು 8.30ಕ್ಕೆ ಬಂಗ್ಲೆಗುಡ್ಡೆಯಲ್ಲಿ ಧ್ವಜಾರೋಹಣ ನಡೆಸಲು ನಿರ್ಧರಿಸಲಾಯಿತು.





























