ಅರಂತೋಡು:ಸುಳ್ಯ ತಾಲೂಕಿನ ಅರಂತೋಡು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 78.5 ಲಕ್ಷ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ ಪೂಜೆ ನೆರವೇರಿಸಿದರು. ವಿವಿಧ ರಸ್ತೆಗಳಾದ
ತೊಡಿಕಾನ- ಕುಂಟುಕಾಡು ರಸ್ತೆ- 15.5 ಲಕ್ಷ, ತೊಡಿಕಾನ- ಚಿಟ್ಟನೂರು ರಸ್ತೆ 10 ಲಕ್ಷ, ಬಾಳೆಕಜೆ ಹರ್ಲಡ್ಕ ರಸ್ತೆ- 5.5 ಲಕ್ಷ,ತೊಡಿಕಾನ ಪಾಷಾಣಮೂರ್ತಿ ಸಂಪರ್ಕ ರಸ್ತೆ -7ಲಕ್ಷ,ನಾಗನಮೂಲೆ ಬಾಳೆಕಜೆ ರಸ್ತೆ- 5.5ಲಕ್ಷ ಪಂಜಿ ಕೋಡಿ ನಾಗನಮೂಲೆ ರಸ್ತೆ -5 ಲಕ್ಷ
ಕಾಡುಪಂಜ ಊರುಪಂಜ ರಸ್ತೆ- 10 ಲಕ್ಷ. ಜಿ.ಪಂ.ಮಾಜಿ ಸದಸ್ಯ ಹರೀಶ್ ಕಂಜಿಪಿಲಿ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಆಡ್ತಲೆ,
ಪ್ರಮುಖರಾದ ಭಾರತಿ ಉಳುವಾರು,ಕೃಷ್ಣಯ್ಯ ಮೂಲೆ ತೋಟ, ಸತೀಶ್ ನಾಯ್ಕ,ಸಂತೋಷ್ ಕುತ್ತಮೊಟ್ಟೆ, ಚಂದ್ರಶೇಖರ್, ರೋಹಿತ್ ಮತ್ತಿತರರು ಉಪಸ್ಥಿತರಿದ್ದರು.








