ಪೆರಾಜೆ:ಪೆರಾಜೆಯಲ್ಲಿ ಇತ್ತೀಚಿಗೆ ಪ್ರಾರಂಭಗೊಂಡು ಪ್ರಗತಿಯಲ್ಲಿರುವ 33/11ಕೆವಿ ವಿದ್ಯುತ್ ಪ್ರಸರಣ ಘಟಕದ ಕಾಮಗಾರಿಯ ಪ್ರಗತಿಯನ್ನು ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ ವೀಕ್ಷಿಸಿದರು. ಸ್ಥಳದಲ್ಲಿ ಉಪಸ್ಥಿತರಿದ್ದ ಅಧಿಕಾರಿಗಳೊಂದಿಗೆ ಕಾಮಗಾರಿಯ ಪ್ರಗತಿಯ ಬಗ್ಗೆ ಹಾಗೂ
ಕಾಮಗಾರಿ ಪೂರ್ಣಗೊಳ್ಳುವ ಕುರಿತು ಮಾಹಿತಿ ಪಡೆದರು.ಪೆರಾಜೆ ವ್ಯಾಪ್ತಿಯಯಲ್ಲಿ 20ಕೋಟಿ ವೆಚ್ಚದಲ್ಲಿ 33ಕೆವಿ ಲೈನ್ ನಿರ್ಮಾಣವಾಗುತ್ತಿದೆ.
ಈ ಭಾಗದ ಜನತೆಗೆ ಗುಣಮಟ್ಟದ ವಿದ್ಯುತ್ ಸರಬರಾಜು ನೀಡಲು ಪೆರಾಜೆ ಭಾಗದ ಸುತ್ತಮುತ್ತಲಿನ ಪ್ರದೇಶಗಳ ವಿದ್ಯುತ್ ಪೂರೈಕೆ, ವೋಲ್ಟೇಜ್ ಸಮಸ್ಯೆ ಹಾಗೂ ವಿದ್ಯುತ್ ಮೂಲಸೌಕರ್ಯವನ್ನು ಮತ್ತಷ್ಟು ಗುಣಮಟ್ಟದ ವಿದ್ಯುತ್ ಪೂರೈಸಲು ಈ ಕಾಮಗಾರಿ ಪೂರ್ಣಗೊಂಡಂತೆ ಸಾಧ್ಯವಾಗಲಿದೆ. ರೈತರ ಕೃಷಿ ಚಟುವಟಿಕೆಗಳಿಗೆ ಹಾಗೂ ಇಲ್ಲಿ ಸ್ಥಾಪಿಸುವ ಲಘು ಉದ್ಯಮಗಳಿಗೂ ಇದು ಸಹಕಾರಿಯಾಗಲಿದೆ ಎಂದು ಬಣ್ಣಿಸಿದರು.
ಈ ಸಂದರ್ಭದಲ್ಲಿ ನಾಪೋಕ್ಲು ಬ್ಲಾಕ್ ಅಧ್ಯಕ್ಷರು ಸೌಕತ್ ಆಲಿ, ವಲಯ ಅಧ್ಯಕ್ಷ ಜಯರಾಮ ಪೆರುಮುಂಡ,ತುಳಸಿ ಗಾಂಧಿಪ್ರಸಾದ್, ಸೂರಜ್ ಹೊಸೂರು, ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.











