ಸುಳ್ಯ:ಸುಳ್ಯ ತಾಲೂಕಿನ ಪ್ರಸಿದ್ಧ ಪುಣ್ಯ ಸ್ಥಳ, ಪರಿಸರ ರಮಣಿಯ ಪ್ರವಾಸಿ ತಾಣ ತೊಡಿಕಾನಕ್ಕೆ ಕೆಎಸ್ಆರ್ಟಿಸಿ ಬಸ್ ಸರ್ವೀಸ್ ಆರಂಭಿಸಿದೆ. ಸುಳ್ಯ ಬಸ್ ನಿಲ್ದಾಣದಿಂದ ತೊಡಿಕಾನಕ್ಕೆ ಬುಧವಾರ ಬೆಳಿಗ್ಗೆ ಬಸ್ ಪ್ರಯಾಣ ಆರಂಭಿಸಿತು.ಮೊದಲ ಪ್ರಯಾಣಕ್ಕೆ ಸುಳ್ಯ ಬಸ್ ನಿಲ್ದಾಣದಲ್ಲಿ
ಗಣ್ಯರ ಉಪಸ್ಥಿತಿಯಲ್ಲಿ ಚಾಲನೆ ನೀಡಲಾಯಿತು.ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಾಹುಲ್ ಹಮೀದ್ ಕುತ್ತಮೊಟ್ಟೆ, ಸುಳ್ಯ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ. ಎಂ. ಮುಸ್ತಫ ಮೊದಲ ಪ್ರಯಾಣಕ್ಕೆ ಹಸಿರು ನಿಶಾನೆ ತೋರಿದರು. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ತೆಂಗಿನ ಕಾಯಿ ಹೊಡೆದು ಶುಭ ಹಾರೈಸಿದರು.ಸುಳ್ಯ

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು,ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶವ ಕೊಳಲುಮೂಲೆ, ಪ್ರಮುಖರಾದ ಚೇತನ್ ಕಜೆಗದ್ದೆ,ಧರ್ಮಪಾಲ ಕೊಯಿಂಗಾಜೆ,ಇಬ್ರಾಹಿಂ ಶಿಲ್ಪಾ, ರಾಧಾಕೃಷ್ಣ ಪರಿವಾರಕಾನ, ನಂದರಾಜ ಸಂಕೇಶ, ಭವಾನಿಶಂಕರ ಕಲ್ಮಡ್ಕ, ವಿಜೇಶ್ ಹಿರಿಯಡ್ಕ, ರಾಜು ಪಂಡಿತ್,ಸಂತೋಷ್ ಕುತ್ತಮೊಟ್ಟೆ, ಶಶಿಧರ ಎಂ.ಜೆ, ಕೆ.ಗೋಕುಲದಾಸ್, ಚಂದ್ರಶೇಖರ ನಡುಮನೆ, ದೀಪಕ್ ಕುತ್ತಮೊಟ್ಟೆ, ರಕ್ಷಿತ್ ದೊಡ್ಡಡ್ಕ, ಅಬ್ಬಾಸ್ ಅಡ್ಪಂಗಾಯ, ಧೀರಾ ಕ್ರಾಸ್ತಾ, ಭೋಜಪ್ಪ ನಾಯ್ಕ್, ಮೊದಲಾದವರು ಉಪಸ್ಥಿತರಿದ್ದರು. ತೊಡಿಕಾನಕ್ಕೆ ಕೆಎಸ್ಆರ್ಟಿಸಿ ಬಸ್ ಸೇವೆ ಆರಂಭಿಸಬೇಕು ಎಂಬುದು ಹಲವು ವರ್ಷಗಳ ಬೇಡಿಕೆಯಾಗಿತ್ತು. ಉದ್ಘಾಟನೆಯ ಬಳಿಕ ಶಾಸಕರು ಸೇರಿ ಪ್ರಮುಖರು ಬಸ್ ನಲ್ ಪ್ರಯಾಣಿಸಿದರು.












