ಬಂದಡ್ಕ: ಬಂದಡ್ಕ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ
ವಾರ್ಷಿಕ ಜಾತ್ರೋತ್ಸವ ಫೆ.5ರಿಂದ 9ರ ತನಕ ಬ್ರಹ್ಮಶ್ರೀ ಇರಿವಲ್ ಕೇಶವ ತಂತ್ರಿ ಅವರ ನೇತೃತ್ವದಲ್ಲಿ ನಡೆಯಲಿದೆ. ವಿವಿಧ ವೈದಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 5 ದಿನಗಳ ಜಾತ್ರಾ ಮಹೋತ್ಸವ ನಡೆಯಲಿದೆ.ಇಂದು (ಫೆ.4) ಸಂಜೆ 6ರಿಂದ
ದೀಪಾರಾಧನೆ, ಆಚಾರ್ಯವರಣ, ಪಶುದಾನ ಪುಣ್ಯಾಹ, ಉತ್ಸವಕ್ಕೆ ಅಕ್ಕಿ ಅಳೆಯುವುದು, ಪ್ರಾಸಾದ ಶುದ್ದಿ, ವಾಸ್ತು ರಕ್ಷೋಘ್ನ ಹೋಮಗಳು, ವಾಸ್ತು ಬಲಿ, ರಾತ್ರಿ ಪೂಜೆ ನಡೆಯಲಿದೆ. ನಾಳೆ(ಫೆ.5ರಂದು)
ಬೆಳಿಗ್ಗೆ 7ಕ್ಕೆ ಗಣಪತಿಹೋಮ, ಉಷಃಪೂಜೆ ನಡೆದು ಬೆಳಿಗ್ಗೆ 8ಕ್ಕೆ ಉಗ್ರಾಣ ತುಂಬಿಸುವುದು. ಗಂಟೆ 8.00 ರಿಂದ ಸಂಜೆ ಗಂಟೆ 5.00ವರೆಗೆ ಭಾಗವತ ಪಾರಾಯಣ ನಡೆಯಲಿದೆ.ಬೆಳಿಗ್ಗೆ 9.00ಕ್ಕೆ ಹಸಿರು ಕಾಣಿಕೆ ಮೆರವಣಿಗೆ ನಡೆದು ಬೆಳಿಗ್ಗೆ 10ಕ್ಕೆ ಧ್ವಜಾರೋಹಣ ನಡೆಯಲಿದೆ.ಮಧ್ಯಾಹ್ನ 12ಕ್ಕೆ ಮಹಾಪೂಜೆ, ಕಲಾಶಾಭಿಷೇಕ,ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ. ಸಂಜೆ ಗಂಟೆ 6ರಿಂದ ನೃತ್ಯ ಭಜನೆ,ತಿರುವಾದಿರ, ನೃತ್ಯ ವೈವಿಧ್ಯ, ಗಾನಾರ್ಚನೆ,ನೃತ್ಯನೃತ್ಯಾದಿಗಳು ನಡೆಯಲಿದೆ.ರಾತ್ರಿ 7.30ಕ್ಕೆ ರಾತ್ರಿಪೂಜೆ 8ಕ್ಕೆ ಶ್ರೀ ಭೂತಬಲಿ ನಡೆಯಲಿದೆ.

ಫೆ.6ರಂದು ಬೆಳಿಗ್ಗೆ 7ಕ್ಕೆ ಗಣಪತಿಹೋಮ, ಉಷಃ ಪೂಜೆ, ಬೆಳಿಗ್ಗೆ 8ರಿಂದ ತುಲಾಭಾರ ಸೇವೆ, ಬೆಳಿಗ್ಗೆ 9ಕ್ಕೆ ಶ್ರೀ ಭೂತಬಲಿ, ಕಲಶಾಭಿಷೇಕ ಬೆಳಿಗ್ಗೆ 10ಕ್ಕೆ ಸೌಂದರ್ಯ ಲಹರಿ, 12ಕ್ಕೆಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಲಿದೆ.ಸಂಜೆ 6ಕ್ಕೆ ದೀಪಾರಾಧನೆ, 6.15ಕ್ಕೆ ತಾಯಂಬಕ,ಸಂಜೆ 6.30 ರಿಂದಭಜನೆ, ನೃತ್ಯ ವೈವಿಧ್ಯ, ತಿರುವಾದಿರ, ನೃತ್ಯಭಜನೆ
ನೃತ್ಯ ವೈವಿಧ್ಯ ನಡೆಯಲಿದೆ.ರಾತ್ರಿ 7.30ಕ್ಕೆ ರಾತ್ರಿ ಪೂಜೆ 8ಕ್ಕೆ ಶ್ರೀ ಭೂತಬಲಿ ನಡೆಯಲಿದೆ.
ಫೆ.7ರಂದು ಬೆಳಿಗ್ಗೆ 7ಕ್ಕೆ ಗಣಪತಿಹೋಮ, ಉಷಃಪೂಜೆ, 8 ರಿಂದ ತುಲಾಭಾರ ಸೇವೆ, 9ಕ್ಕೆ ಶ್ರೀ ಭೂತಬಲಿ,ಕಲಶಾಭಿಷೇಕ11ಕ್ಕೆ ವಿಷ್ಣು ಸಹಸ್ರನಾಮ ಪೂಜೆ, ಭಜನೆ,ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ.ಸಂಜೆ 6ಕ್ಕೆದೀಪಾರಾಧನೆ, 6.15ಕ್ಕೆ ತಾಯಂಬಕ, ಸಂಜೆ 6.30 ರಿಂದ ನೃತ್ಯ ವೈವಿಧ್ಯ,ಧಾರ್ಮಿಕ ಉಪನ್ಯಾಸ,ನೃತ್ಯ ವೈವಿಧ್ಯ, ಯಕ್ಷಗಾನ-ಸಮುದ್ರ ವಥನ,7.30ಕ್ಕೆರಾತ್ರಿಪೂಜೆ, 8ಕ್ಕೆ ಶ್ರೀ ಭೂತಬಲಿ ನಡೆಯಲಿದೆ.

ಫೆ.8ರಂದು ಪೂ.ಗಂಟೆ 7ಕ್ಕೆ ಗಣಪತಿಹೋಮ, ಉಷಃ ಪೂಜೆ, ಬೆಳಿಗ್ಗೆ 8 ರಿಂದ ತುಲಾಭಾರ ಸೇವೆ, 9ಕ್ಕೆ ಶ್ರೀ ಭೂತಬಲಿ, ಕಲಶಾಭಿಷೇಕ
11.30ರಿಂದ ಭಜನೆ, ಮಧ್ಯಾಹ್ನ 12ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, ಸಂಜೆ 6ಕ್ಕೆ ದೀಪಾರಾಧನೆ, 6.15ಕ್ಕೆ ತಾಯಂಬಕ,6.30ರಿಂದ ಭಜನೆ,ನೃತ್ಯಭಜನೆ,ತಿರುವಾದಿರ,ಭಕ್ತಿ ಗೀತೆ, ಧಾರ್ಮಿಕ ಉಪನ್ಯಾಸ,ನೃತ್ಯವೈವಿಧ್ಯ, 7.30ಕ್ಕೆ ರಾತ್ರಿ ಪೂಜೆ
8ಕ್ಕೆ ಶ್ರೀ ಭೂತಬಲಿ ರಾತ್ರಿ 11ಕ್ಕೆ ಕಟ್ಟೆ ಪೂಜೆ. ಸಿಡಿಮದ್ದು ಸೇವೆ,
ನೃತ್ಯೋತ್ಸವ, ದರ್ಶನಬಲಿ, ಶಯನ.
ಫೆ.9ರಂದು ಬೆಳಿಗ್ಗೆ ನಡೆ ತೆರೆಯುವುದು, ದೀಪಾರಾಧನೆ, ಉಷಪೂಜೆ
ಮಧ್ಯಾಹ್ನ 12.30ಕ್ಕೆ ಅನ್ನದಾನ, ಸಂಜೆ 3ಕ್ಕೆ : ಕೈಕೊಟ್ಟಿಕಳಿ, 3.30ಕ್ಕೆ ಭಜನೆ ಸಂಜೆ 5ಕ್ಕೆ ಶ್ರೀ ಭೂತಬಲಿ ಹೊರಟು ಉತ್ಸವ ಮೂರ್ತಿಗಳೊಂದಿಗೆ
ಆರಾಟು ಮೆರವಣಿಗೆ ಬೇತಲ ಆರಾಟು ಗದ್ದೆಯಲ್ಲಿ ಕಲ್ಲುರ್ಟಿ ದೈವದ ಕೋಲ, ಅವಭೃತ ಸ್ನಾನ ರಾತ್ರಿ ಗಂಟೆ 10ಕ್ಕೆ ಧ್ವಜಾವರೋಹಣ, ಮಹಾಪೂಜೆ, ದೀಪಾರಾಧನೆ, ರಾತ್ರಿಪೂಜೆಯಾಗಿ ಉತ್ಸವ ಉತ್ಸವ ಸಂಪನ್ನಗೊಳ್ಳಲಿದೆ ಎಂದು ದೇವಾಲಯದ ಮೊಕ್ತೇಸರರಾದ ಬಿ. ಸದಾನಂದ ರೈ ಹಾಗೂ ಮಹೋತ್ಸವ ಆಚರಣೆ ಮತ್ತು ದೇವಾಲಯ ಆಡಳಿತ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.