ಸುಳ್ಯ:ಅರಂಬೂರು ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಮಾ.15ರಿಂದ 18ರ ತನಕ ನಡೆಯಲಿದೆ. ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಫೆ.4ರಂದು ನಡೆಯಿತು. ವಯನಾಟ್ ಕುಲವನ್ ದೈವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಹಿರಿಯ ಉದ್ಯಮಿ ಕೃಷ್ಣ ಕಾಮತ್ ಅರಂಬೂರು ಬಿಡುಗಡೆ ಮಾಡಿದರು. ಮಹೋತ್ಸವ ಸಮಿತಿಯ ಅಧ್ಯಕ್ಷ ಪಿ.ಬಿ.ಸುಧಾಕರ ರೈ ಹಾಗೂ ಪ್ರಮುಖರು ಮಾತನಾಡಿದರು. ಮಹೋತ್ಸವ ಸಮಿತಿಯ

ಪ್ರಧಾನ ಕಾರ್ಯದರ್ಶಿ ಪವಿತ್ರನ್ ಗುಂಡ್ಯ, ಕೋಶಾಧಿಕಾರಿ ಜತ್ತಪ್ಪ ರೈ, ಆಡಳಿತ ಸಮಿತಿ ಅಧ್ಯಕ್ಷ ನಾರಾಯಣ ಬಾರ್ಪಣೆ, ಆಡಳಿತ ಸಮಿತಿ ಕೋಶಾಧಿಕಾರಿ ರಧೀಶನ್ ಅರಂಬೂರು, ಕುಟುಂಬದ ಯಜಮಾನ ಕುಂಞಿಕಣ್ಣ.ಎ, ಮಹೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಎನ್.ಎ.ರಾಮಚಂದ್ರ, ನಾರಾಯಣ ಕೇಕಡ್ಕ, ಕೆ.ಎಸ್.ಕೃಷ್ಣಪ್ಪ ಕೆದಂಬಾಡಿ, ರಾಧಾಕೃಷ್ಣ ಪರಿವಾರಕಾನ, ಪದ್ಮಯ್ಯ ಪಡ್ಪು, ಕುಂಞಿರಾಮನ್ ಶ್ರೀಶೈಲಂ, ಪ್ರಮುಖರಾದ ಕೊರಗಪ್ಪ ಮಾಸ್ತರ್ ಕಣಕ್ಕೂರು, ಜಯಪ್ರಕಾಶ್ ಕುಂಚಡ್ಕ, ಎ.ಸಿ.ವಸಂತ, ಭಾಸ್ಕರನ್ ನಾಯರ್ ಅರಂಬೂರು, ಪ್ರಭಾಕರನ್ ನಾಯರ್ ಅರಂಬೂರು.ಅಶೋಕ ಪೀಚೆ, ಗಂಗಾಧರ ನೆಡ್ಚಿಲ್, ಜಯಪ್ರಕಾಶ್ ಅರಂಬೂರು ಮತ್ತಿತರರು ಇದ್ದರು.