ಬಂದಡ್ಕ: ಬಂದಡ್ಕ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ನಡೆದ ವೈಭವ ವಾರ್ಷಿಕ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ವಿವಿಧ ವೈದಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ 5 ದಿನಗಳ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಿತು. ಕೊನೆಯ ದಿನವಾದ

ಫೆ.9 ರಂದು ಬೆಳಿಗ್ಗೆ ದೀಪಾರಾಧನೆ, ಉಷಃ ಪೂಜೆ
ಮಧ್ಯಾಹ್ನ ಅನ್ನದಾನ, ಸಂಜೆ ಕೈಕೊಟ್ಟಿಕಳಿ, ಭಜನೆ ನಡೆಯಿತು ಬಳಿಕ ಶ್ರೀ ಭೂತಬಲಿ ಹೊರಟು ಉತ್ಸವ ಮೂರ್ತಿಗಳೊಂದಿಗೆ
ಆರಾಟು ಮೆರವಣಿಗೆ ನಡೆಯಿತು.ಬೇತಲ ಆರಾಟು ಗದ್ದೆಯಲ್ಲಿ ಕಲ್ಲುರ್ಟಿ ದೈವದ ಕೋಲ ನಡೆದು ಅವಭೃತ ಸ್ನಾನ ನಡೆದು ರಾತ್ರಿ ಧ್ವಜಾವರೋಹಣವಾಯಿತು. ಮಹಾಪೂಜೆ, ದೀಪಾರಾಧನೆ, ರಾತ್ರಿಪೂಜೆಯಾಗಿ ಉತ್ಸವ ಉತ್ಸವ ಸಂಪನ್ನಗೊಂಡಿತು.