ಗುತ್ತಿಗಾರು: ಇಂಪಾರ್ಟೆಂಟ್ ಎಫ್ಸಿ ಗುತ್ತಿಗಾರು (Important FC (R.) Guthigar) ಆಯೋಜಿಸಿದ ಜಿಲ್ಲಾ ಮಟ್ಟದ ಐಎಫ್ಸಿ ಮ್ಯಾರಥಾನ್ ಗುತ್ತಿಗಾರಿನಲ್ಲಿ ನಡೆಯಿತು.ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದ ಕ್ರೀಡಾ ಪಟುಗಳು ಮ್ಯಾರಥಾನ್ನಲ್ಲಿ ಭಾಗವಹಿಸಿದ್ದರು.ಸಂಸ್ಥೆಯ ಅಧ್ಯಕ್ಷ ಮುಳಿಯ ಸಾತ್ವಿಕ್ ನೇತೃತ್ವದಲ್ಲಿ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ
ಪ್ರಮುಖರಾದ ವೆಂಕಟ್ ದಂಬೆಕೋಡಿ ಮತ್ತು ನಿತ್ಯಾನಂದ ಮುಂಡೋಡಿ ಭಾಗವಹಿಸಿ ಶುಭ ಹಾರೈಸಿದರು.ಬಹುಮಾನ ವಿತರಣೆಯನ್ನು ವಿನ್ಯಾಸ್ ಕೋಚ್ಚಿ ನೆರವೇರಿಸಿದರು. ಅತಿಥಿಗಳಾಗಿ ದಿನೇಶ್ ಹಾಲೆಮಜಲು ಮಂದಾರ ಬಾಳುಗೋಡು ಉಪಸ್ಥಿತರಿದ್ದರು.

ಐಎಫ್ಸಿ ಗುತ್ತಿಗಾರಿನ ಉಪಾಧ್ಯಕ್ಷರಾದ ಕೌಶಿಕ್ ಶ್ಯಾಮ್, ಸುಮುಖ ರಾಮ್, ಶ್ರೀಶರಣ್ ಮೋಗ್ರಾ
ಮೊನಿಷ್ ಬಾಕಿಲ ಕಾರ್ಯದರ್ಶಿಗಳಾದ ವರ್ಷಿತ್ ಕಡ್ತಲ್ ಕಜೆ ಮತ್ತು ಕಿರಣ್ ವಳಲಂಬೆ ಉಪಸ್ಥಿತರಿದ್ದರು. ನಿರ್ದೇಶಕರಾದ ರಾಕೇಶ್ ಮೆಟ್ಟಿನಡ್ಕ ಮತ್ತು ಬಾಲಕೃಷ್ಣ ಉಜಿರಡ್ಕ ಸಹಕರಿಸಿದರು. ಸಂಯೋಜಕರಾಗಿ ಚರಣ್ ಕೊಂಬೊಟ್ಟು ಈ ಕಾರ್ಯಕ್ರಮವನ್ನು ನಿರ್ವಹಿಸಿದರು.