ಬಂದಡ್ಕ: ಬಂದಡ್ಕ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ವೈಭವದ ಜಾತ್ರೋತ್ಸವ ನಡೆಯಿತು.ಫೆ.5ರಿಂದ ಆರಂಭಗೊಂಡ ಜಾತ್ರೋತ್ಸವದ ಅಂಗವಾಗಿ ವಿವಿಧ ವೈದಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಿತು.ಫೆ.8ರಂದು ಬೆಳಿಗ್ಗೆ ಗಣಪತಿಹೋಮ, ಉಷಃ ಪೂಜೆ,ತುಲಾಭಾರ ಸೇವೆ, ಶ್ರೀ ಭೂತಬಲಿ, ಕಲಶಾಭಿಷೇಕ ನಡೆಯಿತು. ಬಳಿಕ
ಭಜನಾ ಸಂಕೀರ್ತನೆ,ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ಸಂಜೆ ದೀಪಾರಾಧನೆ, ತಾಯಂಬಕ, ಭಜನೆ,ನೃತ್ಯ ಭಜನೆ, ತಿರುವಾದಿರ,ಭಕ್ತಿ ಗೀತೆ, ಧಾರ್ಮಿಕ ಉಪನ್ಯಾಸ,ನೃತ್ಯವೈವಿಧ್ಯ ಸಂಪನ್ನಗೊಂಡಿತು. ರಾತ್ರಿ ಪೂಜೆ ಶ್ರೀ ಭೂತಬಲಿ ಕಟ್ಟೆ ಪೂಜೆ. ಸಿಡಿಮದ್ದು ಸೇವೆ,ನೃತ್ಯೋತ್ಸವ, ದರ್ಶನಬಲಿ, ನಡೆಯಿತು.

ಇಂದು (ಫೆ.9ರಂದು) ಬೆಳಿಗ್ಗೆ ದೀಪಾರಾಧನೆ, ಉಷಪೂಜೆ ಮಧ್ಯಾಹ್ನ 12.30ಕ್ಕೆ ಅನ್ನದಾನ, ಸಂಜೆ 3ಕ್ಕೆ : ಕೈಕೊಟ್ಟಿಕಳಿ, 3.30ಕ್ಕೆ ಭಜನೆ ಸಂಜೆ 5ಕ್ಕೆ ಶ್ರೀ ಭೂತಬಲಿ ಹೊರಟು ಉತ್ಸವ ಮೂರ್ತಿಗಳೊಂದಿಗೆ ಆರಾಟು ಮೆರವಣಿಗೆ
ಬೇತಲ ಆರಾಟು ಗದ್ದೆಯಲ್ಲಿ ಕಲ್ಲುರ್ಟಿ ದೈವದ ಕೋಲ, ಅವಭೃತ ಸ್ನಾನ
ರಾತ್ರಿ ಗಂಟೆ 10ಕ್ಕೆ ಧ್ವಜಾವರೋಹಣ, ಮಹಾಪೂಜೆ, ದೀಪಾರಾಧನೆ, ರಾತ್ರಿಪೂಜೆಯಾಗಿ ಉತ್ಸವ ಉತ್ಸವ ಸಂಪನ್ನಗೊಳ್ಳಲಿದೆ. ದೇವಾಲಯದ ಮೊಕ್ತೇಸರರಾದ ಬಿ. ಸದಾನಂದ ರೈ ಹಾಗೂ ಮಹೋತ್ಸವ ಆಚರಣೆ ಮತ್ತು ದೇವಾಲಯ ಆಡಳಿತ ಸಮಿತಿ ಪದಾಧಿಕಾರಿಗಳು ಜಾತ್ರೋತ್ಸವದ ನೇತೃತ್ವ ವಹಿಸಿದ್ದರು.