ಕನಕಮಜಲು: ಕನಕಮಜಲಿನಲ್ಲಿ ಕಾರು ಡಿಕ್ಕಿ ಹೊಡೆದು ಗಂಭೀರಗೊಂಡಿದ್ದ ಇಬ್ಬರು ಮೃತಪಟ್ಟಿದ್ದಾರೆ. ಶನಿವಾರ ರಾತ್ರಿ ಕಾರು ಢಿಕ್ಕಿ ಹೊಡೆದು ಗಂಭೀರವಾಗಿ ಗಾಯಗೊಂಡಿದ್ದ ಇಬ್ಬರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರಾಮಯ್ಯ ಶೆಟ್ಟಿ (67) ಹಾಗೂ ಜನಾರ್ದನ ಶೆಟ್ಟಿ (50 ವ) ಅವರು ಮೃತಪಟ್ಟವರು ಎಂದು
ತಿಳಿದುಬಂದಿದೆ. ಕನಕಮಜಲಿನಲ್ಲಿ ನಡೆದ ಏಕಾಹ ಭಜನೆಗೆ ಬಂದಿದ್ದ ಜನಾರ್ದನ ಶೆಟ್ಡಿ ಹಾಗೂ ರಾಮಯ್ಯ ಶೆಟ್ಟಿ ಅವರು ಮುಖ್ಯರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ವೇಳೆ ಪುತ್ತೂರಿನಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಕಾರೊಂದು ವೇಗವಾಗಿ ಬಂದು ಇವರಿಬ್ಬರಿಗೆ ಢಿಕ್ಕಿ ಹೊಡೆದಿದೆ. ರಸ್ತೆ ಬದಿಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಂಡ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು.