ಸುಳ್ಯ:ಶಿಕ್ಷಕರ ದಿನಾಚರಣೆಯ ಅಂಗವಾಗಿ ರೋಟರಿ ಕ್ಲಬ್ ನೀಡಿದ “ನೇಷನ್ ಬಿಲ್ಡರ್ ಅವಾರ್ಡ್ “ಮತ್ತು ದ ಕ ಜಿಲ್ಲಾ ಪ.ಪೂ ಪ್ರಾಚಾರ್ಯರ ಸಂಘ ಮಂಗಳೂರು,ಹಾಗೂ ವಿವಿಧ ವಿಷಯವಾರು ಉಪನ್ಯಾಸಕರ ಸಂಘ, ದೈ. ಶಿಕ್ಷಣ ಉಪನ್ಯಾಸಕರ ಸಂಘ, ಆಳ್ವಾಸ್ ಪಪೂ ಕಾಲೇಜು ಮೂಡಬಿದಿರೆ ಇವರ ವತಿಯಿಂದ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಉಪನ್ಯಾಸಕಿ ಬೇಬಿ ವಿದ್ಯಾ ಪಿ ಬಿ ಅವರನ್ನು
ಸುಳ್ಯ ತಾಲೂಕು ಗೌಡ ಮಹಿಳಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.ಗೌಡರ ಯುವ ಸೇವಾ ಸಂಘದ ಸ್ಥಾಪಕ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಸಂಘದ ಅಧ್ಯಕ್ಷರ ಪಿ.ಎಸ್.ಗಂಗಾಧರ, ಗೌಡ ಮಹಿಳಾ ಗೌಡ ಘಟಕದ ಮಾಜಿ ಅಧ್ಯಕ್ಷರಾದ ರೇಣುಕಾ ಸದಾನಂದ ಜಾಕೆ, ಪುಪ್ಪಾ ರಾಧಾಕೃಷ್ಣ ಮಾಣಿಬೆಟ್ಟು, ಗೌಡರ ಯುವ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ತೀರ್ಥರಾಮ ಅಡ್ಕಬಳೆ, ವೆಂಕಟ್ರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ ಟಿ ವಿಶ್ವನಾಥ್, ಗೌಡ ಮಹಿಳಾ ಘಟಕದ ಕೋಶಾಧಿಕಾರಿ ಜಯಶ್ರೀ ರಾಮಚಂದ್ರ ಪಲ್ಲತಡ್ಕ ಉಪಸ್ಥಿತರಿದ್ದರು. ಗೌಡ ಮಹಿಳಾ ಘಟಕದ ಅಧ್ಯಕ್ಷೆ ವಿನುತಾ ಪಾತಿಕಲ್ಲು ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು, ಕಾರ್ಯದರ್ಶಿ ಸವಿತಾ ಸಂದೇಶ್ ನಡುಮುಟ್ಲು, ಸಂದೇಶ್ ಪರಿಚಯ ಪತ್ರ ವಾಚಿಸಿದರು.ಚಂದ್ರಾವತಿ ಮೋನಪ್ಪ ಚಿದ್ಗಲ್ ವಂದಿಸಿದರು. ಗೌಡ ಮಹಿಳಾ ನಗರ ಘಟಕದ ಅಧ್ಯಕ್ಷೆ ಹರ್ಷ ಕರುಣಾಕರ, ತಾಲೂಕು ಗೌಡ ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.