ಸುಳ್ಯ:ಗಡಿನಾಡ ಗಾನಕೋಗಿಲೆ ಕಲಾವಿದರ ವೇದಿಕೆ ಬದಿಯಡ್ಕ ಕಾಸರಗೋಡು ಜಿಲ್ಲೆ ಮತ್ತು ಬಿ.ಶಿವಕುಮಾರ್ ಸಾರಥ್ಯದ ಸ್ವರ್ಣಭೂಮಿ ಫೌಂಡೇಶನ್ ಕೋಲಾರ ನೇತೃತ್ವದಲ್ಲಿ ಕೊಡಮಾಡುವ ಗಡಿನಾಡ ಕಾಸರಗೋಡು ಕನ್ನಡ ರಾಜ್ಯೋತ್ಸವ 2024 ಪ್ರಶಸ್ತಿ ಸುಳ್ಯದ ಬಾಲನಟ ಬಾಲಗಾಯಕ ಅಶ್ವಿಜ್ ಆತ್ರೇಯ ಸುಳ್ಯ ಇವರಿಗೆ ಲಭಿಸಿದೆ. ಗಡಿನಾಡ ರಾಜ್ಯೋತ್ಸವದಲ್ಲಿ
ಪ್ರಶಸ್ತಿ ನೀಡಿ ಗೌರವಿಸಲಾಯಿತು ಪ್ರಭು ಬುಕ್ ಸೆಂಟರ್ ಮಾಲಕರಾದ ರಾಮಚಂದ್ರ ಮತ್ತು ಉಷಾ ದಂಪತಿಗಳ ದ್ವಿತೀಯ ಪುತ್ರ. ಅಶ್ವಿಜ್ ಸಂಗೀತ ,ನಟನೆ , ಮಾಡೆಲಿಂಗ್ ,ಯಕ್ಷಗಾನ ,ನೃತ್ಯ ಮಿಮಿಕ್ರಿ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಪ್ರತಿಭೆ. ಸೈಂಟ್ ಜೋಸೆಪ್ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ. ಪ್ರಸ್ತುತ ಗಾನಸಿರಿ ಕಲಾಕೇಂದ್ರ ಹಾಗು ಸುನಾದ ಸಂಗೀತ ಶಾಲೆಯಲ್ಲಿ ಸಂಗೀತವನ್ನು ಕಲಿಯುತಿದ್ದಾನೆ.