ನವದೆಹಲಿ:ಜಪಾನ್ ದೇಶದ ಐಚಿ ನಗೋಯಾದಲ್ಲಿ ನಡೆಯಲಿರುವ ಏಷ್ಯನ್ ಕ್ರೀಡಾಕೂಟಕ್ಕೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದ್ದು ಏಷ್ಯನ್ ಗೇಮ್ಸ್ಗೆ ಕ್ಷಣಗಣನೆ ಆರಂಭಗೊಂಡಿದೆ.ಸೆ 19ರಿಂದ ಕ್ರೀಡಾ ಕೂಟವು ಆರಂಭವಾಗಲಿದೆ. ಕ್ರೀಡಾ ಕೂಟದಲ್ಲಿ ಭಾಗವಹಿಸುವ ಭಾರತ ತಂಡದಲ್ಲಿ ಒಟ್ಟು
501 ಅಥ್ಲೀಟ್ಗಳು (ಪುರುಷ 267, ಮಹಿಳೆಯರು 234 ) ಇದ್ದಾರೆ. 265 ನೆರವು ಸಿಬ್ಬಂದಿ ಇದ್ದಾರೆ. 36 ವಿಭಾಗಗಳಲ್ಲಿ ಕಣಕ್ಕಿಳಿಯಲಿದ್ದಾರೆ. ಹೋದ ಸಲ ಹಾಂಗ್ಝೌನಲ್ಲಿ ನಡೆದಿದ್ದ ಕೂಟದಲ್ಲಿ ಭಾರತದ 503 ಅಥ್ಲೀಟ್ಗಳು ಭಾಗವಹಿಸಿದ್ದರು. ಭಾರತ ತಂಡದಲ್ಲಿ 310 ಮಂದಿ ಇದೇ ಮೊದಲ ಬಾರಿಗೆ ಕೂಟದಲ್ಲಿ ಆಡಲಿದ್ದಾರೆ. ಹೋದವರ್ಷದ
106 ಪದಕಗಳ ದಾಖಲೆಯನ್ನು ಈ ಮೀರಿ ಹೆಚ್ಚು ಪದಕ ಪಡೆಯುವ ಹುಮ್ಮಸ್ಸಿನಲ್ಲಿದೆ ತಂಡ.ಈ ಬಾರಿಯ ತಂಡದಲ್ಲಿ 15 ವರ್ಷದ ಕ್ರಿಕೆಟಿಗ ವೈಭವ್ ಸೂರ್ಯವಂಶಿ, 18 ವರ್ಷದ ಬ್ಯಾಡ್ಮಿಂಟನ್ ಆಟಗಾರ ಆಯುಷ್ ಶೆಟ್ಟಿ, ಟಿಟಿ ಆಟಗಾರ್ತಿ ಸಿಂಡ್ರೆಲಾ ದಾಸ್, ಸ್ಕ್ವಾಷ್ ಆಟಗಾರ್ತಿ ಅನಾಹತ್ ಸಿಂಗ್, ಜುಡೊಕಾ ಅಸ್ಮಿತಾ ಡೇ ಸೇರಿ ಹಲವು ಪ್ರತಿಭಾವಂತ ಕ್ರೀಡಾಪಟುಗಳು ಇದ್ದಾರೆ.











