ದೆಹಲಿ:ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಟೀಂ ಇಂಡಿಯಾ 3 ಪಂದ್ಯಗಳ ಸರಣಿಯಲ್ಲಿ 2-0 ಅಂತರದಲ್ಲಿ ಗೆದ್ದುಕೊಂಡಿದೆ. ಮೊದಲು ಬ್ಯಾಟ್ ಮಾಡಿದ ಅಫ್ಘಾನ್ 20 ಓವರ್ಗಳಲ್ಲಿ 8 ವಿಕಟ್ ನಷ್ಟಕ್ಕೆ 159 ರನ್ ಗಳಿಸಿತು.ಗುರಿ ಬೆನ್ನಟ್ಟಿದ ಭಾರತ 14.5 ಓವರ್ಗಳಲ್ಲಿ
3 ವಿಕೆಟ್ ನಷ್ಟಕ್ಕೆ163 ರನ್ ಗಳಿಸಿ 7 ವಿಕೆಟ್ ಜಯ ದಾಖಲಿಸಿತು. ಆರಂಭಿಕ ಬ್ಯಾಟರ್ ಸಂಜು ಸ್ಯಾಮ್ಸನ್ ಸ್ಫೋಟಕ ಅರ್ಧ ಶತಕ ದಾಖಲಿಸಿದರು.ಸಂಜು 22 ಎಸೆತಗಳಲ್ಲಿ 7 ಬೌಂಡರಿ ಹಾಗು 4 ಸಿಕ್ಸರ್ ನೆರವಿನಿಂದ 57 ರನ್ ಚಚ್ಚಿದರು.ಇನ್ನೊಬ್ಬ ಆರಂಭಿಕ ಬ್ಯಾಟರ್ ಅಭಿಷೇಕ್ ಶರ್ಮ 19 ಎಸೆತಗಳಲ್ಲಿ 7 ಬೌಂಡರಿ ಹಾಗು 4 ಸಿಕ್ಸರ್ ನೆರವಿನಿಂದ 39 ರನ್ ಬಾರಿಸಿದರು. ಇವರಿಬ್ಬರು ಮೊದಲ ವಿಕೆಟ್ಗೆ 6.2 ಓವರ್ಗಳಲ್ಲಿ 88 ರನ್ ಸಿಡಿಸಿ ಭದ್ರ ಅಡಿಪಾಯ ಹಾಕಿದರು. ಇಶಾನ್ ಕಿಶನ್ 23 ಎಸೆತಗಳಲ್ಲಿ 3ಬೌಂಡರಿ ಹಾಗು 2 ಸಿಕ್ಸರ್ ನೆರವಿನಿಂದ ಅಜೇಯ 38 ರನ್ ಬಾರಿಸಿದರು. ಶ್ರೇಯಸ್ ಅಯ್ಯರ್ 11, ತಿಲಕ್ ವರ್ಮ ಅಜೇಯ 15 ರನ್ ಬಾರಿಸಿದರು.
ಭಾರತದ ಪರ ಆಲ್ ರೌಂಡರ್ ನಿತೀಶ್ ಕುಮಾರ್ ರೆಡ್ಡಿ 3 ಓವರ್ಗಳಲ್ಲಿ ಕೇವಲ 24 ರನ್ ನೀಡಿ ಪ್ರಮುಖ 3 ವಿಕೆಟ್ ಕಬಳಿಸುವ ಮೂಲಕ ಅಫ್ಘಾನ್ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇವರಿಗೆ ಉತ್ತಮ ಸಾಥ್ ನೀಡಿದ ವೇಗಿ ಅರ್ಷದೀಪ್ ಸಿಂಗ್ 35 ರನ್ನಿಗೆ 2 ವಿಕೆಟ್ ಪಡೆದರೆ, ಜಸ್ಪ್ರೀತ್ ಬುಮ್ರಾ, ಅಕ್ಷರ್ ಪಟೇಲ್ ಮತ್ತು ಕಮ್ಬ್ಯಾಕ್ ಮಾಡಿದ ರವಿ ಬಿಷ್ಣೋಯಿ ತಲಾ ಒಂದು ವಿಕೆಟ್ ಹಂಚಿಕೊಂಡರು.ಅಫ್ಘಾನಿಸ್ತಾನ ಪರ
ಇಬ್ರಾಹಿಂ ಝದ್ರನ್ 37,ರಶೀದ್ ಖಾನ್ 28,ದರ್ವಿಶ್ ರಸೂಲಿ 26,
ಮೊಹಮ್ಮದ್ ನಬಿ 20 ರನ್ ಬಾರಿಸಿದರು.











