ಐಚಿ-ನಗೋಯ:ಜಪಾನ್ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ, ಸೆ.27ರಂದು ಭಾರತ 4 ಬೆಳ್ಳಿ ಪದಕ ಹಾಗು 3 ಕಂಚಿನ ಪದಕ ಸೇರಿ 7 ಪದಕ ಪಡೆದುಕೊಂಡಿದೆ. ಇದುವರೆಗೆ ಭಾರತದ ಒಟ್ಟು ಪದಕಗಳ
ಸಂಖ್ಯೆ 37ಕ್ಕೆ ಏರಿದೆ. 4 ಚಿನ್ನ, 16 ಬೆಳ್ಳಿ 17 ಕಂಚು ಪದಕಗಳನ್ನು ಪಡೆದುಕೊಂಡಿದೆ. ಭಾರತವು ಪದಕಗಳ ಪಟ್ಟಿಯಲ್ಲಿ ಪ್ರಸ್ತುತ 12ನೇ ಸ್ಥಾನದಲ್ಲಿದೆ. ಪುರುಷರ ಸಿಂಗಲ್ಸ್ ಸ್ಕ್ವಾಷ್ನಲ್ಲಿ
ಅಭಯ್ ಸಿಂಗ್, ಮಹಿಳೆಯರ ಸಿಂಗಲ್ಸ್ ಸ್ಕ್ವಾಷ್ನಲ್ಲಿ ಅನಾಹತ್ ಸಿಂಗ್,ಮಹಿಳೆಯರ ಲಾಂಗ್ ಜಂಪ್ನಲ್ಲಿ ಆನ್ಸಿ ಸೋಜನ್, ಪುರುಷರ ಹೈ ಜಂಪ್ನಲ್ಲಿ ರ್ವೇಶ್ ಕುಶಾರೆ – ಸರ್ವೇಶ್ ಕುಶಾರೆ ಬೆಳ್ಳಿ ಪದಕ ಪಡೆದರು.ಮಹಿಳೆಯರ 200 ಮೀಟರ್ ಓಟದಲ್ಲಿ ಹರಿತಾ ಭದ್ರಾ, ಪುರುಷರ ಡೆಕಾಥ್ಲಾನ್ನಲ್ಲಿ ತೇಜಸ್ವಿನ್ ಶಂಕರ್, ಮಹಿಳೆಯರ 3000 ಮೀಟರ್ ಸ್ಟೀಪಲ್ಚೇಸ್ನಲ್ಲಿ ಪಾರುಲ್ ಚೌಧರಿ ಕಂಚಿನ ಪದಕ ಪಡೆದರು.ಬಾಕ್ಸರ್ ಅಂಕುಶ್ ಪಂಘಲ್ ಮತ್ತು ಪರ್ವೀನ್ ಹೂಡಾ ಅವರು ಸೆಮಿಫೈನಲ್ ಪ್ರವೇಶಿಸುವ ಮೂಲಕ ಭಾರತಕ್ಕೆ ಪದಕ ಖಚಿತಪಡಿಸಿದ್ದಾರೆ.








