ದುಬೈ:ಭಾರತ ತಂಡವು ಏಷ್ಯಾ ಕಪ್ ಮಹಿಳಾ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಫೈನಲ್ಗೆ ಲಗ್ಗೆ ಹಾಕಿತು.ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹರ್ಮನ್ಪ್ರೀತ್ ಕೌರ್ ಪಡೆ 40 ರನ್ ಗಳಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿತು.ಟಾಸ್ ಗೆದ್ದ ಬಾಂಗ್ಲಾದೇಶ ತಂಡವು
ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಸ್ಫೋಟಕ ಬ್ಯಾಟರ್ ಶಫಾಲಿ (64;40ಎ, 4×7, 6×3) ಮತ್ತೊಮ್ಮೆ ಭಾರತ ತಂಡಕ್ಕೆ ಆಸರೆಯಾದರು. ಅವರ ಬ್ಯಾಟಿಂಗ್ ನೆರವಿನಿಂದ ತಂಡವು 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 149 ರನ್ ಗಳಿಸಿತು.ಗುರಿ ಬೆನ್ನಟ್ಟಿದ ಬಾಂಗ್ಲಾ ತಂಡವು ಭಾರತದ ಬೌಲರ್ಗಳ ಪರಿಣಾಮಕಾರಿ ಬೌಲಿಂಗ್ ದಾಳಿಯ ಎದುರು ಪರದಾಡಿತು. ಅಂತಿಮವಾಗಿ 7 ವಿಕೆಟ್ಗೆ 109 ರನ್ ಗಳಿಸಿ ಓವರ್ಗಳನ್ನು ಮುಗಿಸಿತು. ದೀಪ್ತಿ (4–0–26–3), ನಂದನಿ ಶರ್ಮಾ (2–0–10–2) ಮತ್ತು ಶ್ರೀಚರಣಿ (4–1–14–1) ಎದುರಾಳಿ ತಂಡವನ್ನು ಕಟ್ಟಿಹಾಕಲು ನೆರವಾದರು.
ಭಾರತ ಪರ ಪ್ರತೀಕಾ ರಾವಲ್ (20 ರನ್) ಹರ್ಮನ್ (ಔಟಾಗದೇ 24), ರಿಚಾ ಘೋಷ್ (21; 16ಎ) ಮತ್ತು ದೀಪ್ತಿ ಶರ್ಮಾ (13; 6ಎ) ತಮ್ಮ ಕಾಣಿಕೆ ನೀಡಿದರು.











