ಸುಳ್ಯ:ಕ್ರೀಡೆಯಲ್ಲಿ ತೊಡಗಿಸಿಕೊಂಡವರು ಅತ್ಯುತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಂಡು ಸಮಾಜಕ್ಕೆ ಮತ್ತು ದೇಶಕ್ಕೆ ಸಂಪತ್ತಾಗುತ್ತಾರೆ. ಆದುದರಿಂದ ಪ್ರತಿಯೊಬ್ಬ ಯುವಕರೂ ಯಾವುದಾದರೊಂದು ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸುಳ್ಯ ಆರಕ್ಷಕ ಉಪನಿರೀಕ್ಷಕರಾದ ಉದಯರವಿ.ವೈ.ಎಂ ಅಭಿಪ್ರಾಯಪಟ್ಟಿದ್ದಾರೆ.
ಸುಳ್ಯದ ಗೋಲ್ಡನ್ ಕ್ಲಬ್ ವತಿಯಿಂದ ಕುರುಂಜಿಗುಡ್ಡೆಯ ಇಂಡೋರ್ ಸ್ಟೇಡಿಯಂನಲ್ಲಿ
ಭಾನುವಾರ ನಡೆದ ‘ಗೋಲ್ಡನ್ ಬರ್ಡ್’
ಶಟಲ್ ಬ್ಯಾಡ್ಮಿಂಟನ್ ಲೀಗ್ ಸೀಸನ್ 2 ಉದ್ಘಾಟಿಸಿ ಅವರು ಮಾತನಾಡಿದರು.ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಅತ್ಯುತ್ತಮ ವ್ಯಕ್ತಿತ್ವದ ಜೊತೆಗೆ ಸದೃಢ ದೇಹ, ಗಟ್ಟಿ ಮನಸ್ಸನ್ನು ಹೊಂದಲು ಸಾಧ್ಯ. ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಅವರು ಯಾವುದೇ ದುಶ್ಚಟಕ್ಕೆ ಬಲಿಯಾಗುವುದಿಲ್ಲ, ರೋಗಗಳಿಂದ ದೂರ ಇರುತ್ತಾರೆ. ಬದುಕಿನ ಯಾವುದೇ ಸವಾಲುಗಳನ್ನು ಎದುರಿಸಲು ಸದೃಢರಾಗಿರುತ್ತಾರೆ ಎಂದು ಅವರು ಅಭಿಪ್ರಾಯಪಟ್ಟರು.
ಗೋಲ್ಡನ್ ಕ್ಲಬ್ನ ಅಧ್ಯಕ್ಷ ಪ್ರಮೋದ್ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಅಂತಾರಾಷ್ಟ್ರೀಯ ಬ್ಯಾಡ್ಮಿಂಟನ್ ಆಟಗಾರ ರಿಜ್ವಾನ್ ಅಹ್ಮದ್ ಜನತಾ,ಸುಳ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ, ಜೆಸಿಐ ಸುಳ್ಯ ಪಯಸ್ವಿನಿಯ ಮಾಜಿ ಅಧ್ಯಕ್ಷ ಗುರುಪ್ರಸಾದ್ ನಾಯಕ್,ಇನ್ಫೋಸಿಸ್ನ

ಸಾಫ್ಟ್ವೇರ್ ಇಂಜಿನಿಯರ್ ರಂಜಿತ್ ಎನ್.ಆರ್, ಉದ್ಯಮಿ ಹೇಮಂತ್ ಕಾಮತ್, ರಂಗಭೂಮಿ ಕಲಾವಿದ ಆನಂದ ಶೆಟ್ಟಿ ಭಾಗವಹಿಸಿದ್ದರು.
ಗೋಲ್ಡನ್ ಕ್ಲಬ್ನ ಕಾರ್ಯದರ್ಶಿ ಕಮಲ್ರಾಜ್ , ಕೋಶಾಧಿಕಾರಿ ಸುರೇಶ್ ಸೋಣಂಗೇರಿ, ನಿರ್ದೇಶಕರಾದ ಕಾರ್ತಿಕ್(ವಿಮಲ್) ನಾಗಪಟ್ಟಣ, ವಿಜಯಕುಮಾರ್ ನಾಗಪಟ್ಟಣ, ಸುರೇಂದ್ರ ನಾಗಪಟ್ಟಣ,ಗಂಗಾಧರ ಕಲ್ಲಪಳ್ಳಿ, ಶಶಿಕುಮಾರ್.ಪಿ, ನವೀನ್, ಶಿವಕುಮಾರ್ ನಾಗಪಟ್ಟಣ ಉಪಸ್ಥಿತರಿದ್ದರು.
ಬಳಿಕ 8 ತಂಡಗಳು ಭಾಗವಹಿಸಿದ ಬ್ಯಾಡ್ಮಿಂಟನ್ ಲೀಗ್ ಪಂದ್ಯಾಟ ನಡೆಯಿತು.










