ಸುಳ್ಯ:ಪ್ರಜಾಧ್ವನಿ ಕರ್ನಾಟಕದ ವತಿಯಿಂದ ಶಿಕ್ಷಕರ ದಿನಾಚರಣೆ ಪ್ರಯುಕ್ತ ನಿವೃತ್ತ ಶಿಕ್ಷಕರು ಹಾಗು ‘ಮುನಿಸು ತರವೇ ಮುಗುದೆ’ ಖ್ಯಾತಿಯ ಖ್ಯಾತ ಕವಿ, ಸಾಹಿತಿ ಸುಬ್ರಾಯ ಚೊಕ್ಕಾಡಿಯವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಪ್ರಜಾಧ್ವನಿ ಕರ್ನಾಟಕ ತಂಡದ ಸದಸ್ಯರು
ಚೊಕ್ಕಾಡಿಯವರ ಸ್ವಗೃಹಕ್ಕೆ ಭೇಟಿ ನೀಡಿ ಸುಬ್ರಾಯ ಚೊಕ್ಕಾಡಿ ದಂಪತಿಗಳನ್ನು ಸನ್ಮಾನಿಸಿದರು.ಪ್ರಜಾಧ್ವನಿ ಕರ್ನಾಟಕದ ಅಧ್ಯಕ್ಷ ಪ್ರವೀಣ್ ಮುಂಡೋಡಿ ಮಾತನಾಡಿದರು.ಪ್ರಜಾಧ್ವನಿ ತಂಡದ ಕೆ. ಪಿ. ಮೋಹನ್ ಕಡಬ, ಶಿವಶಂಕರ್ ಕಡಬ, ವಸಂತ ಪೆಲತ್ತಡ್ಕ, ಮಹೇಶ್ ಬೆಳ್ಳಾರ್ಕರ್, ಅಶ್ರಫ್ ಸಾಹುಕಾರ್, ಮಂಜುನಾಥ ಮಡ್ತಿಲ, ಕೇಶವ ಮೊರಂಗಲ್ಲು, ಭರತ್ ಕುಕ್ಕುಜಡ್ಕ, ಚೆನ್ನಕೇಶವ ಕಣಪಿಲ ಉಪಸ್ಥಿತರಿದ್ದರು.











