ನವದೆಹಲಿ:ವಿಧಾನಸಭೆ ಚುನಾವಣೆ ನಡೆದ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಹಾಗೂ ಸಿಕ್ಕಿಂನಲ್ಲಿ ಸಿಕ್ಕಿಂ ಕ್ರಾಂತಿ ಮೋರ್ಚಾ(ಎಸ್ಕೆಎಂ) ಅಧಿಕಾರದತ್ತ ಮುನ್ನಡೆದಿದೆ. 60 ಸದಸ್ಯ ಬಲದ ಅರುಣಾಚಲ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ
ಬಿಜೆಪಿ 41 ಸ್ಥಾನಗಳನ್ನು ಗೆದ್ದಿದೆ. ಉಳಿದಂತೆ ಎನ್ಪಿಪಿ 4 ಮತ್ತು ಇತರರು 5 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದಾರೆ.ಉಳಿದ 10 ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ.
32 ಸದಸ್ಯ ಬಲದ ಸಿಕ್ಕಿಂನಲ್ಲಿ ಎಸ್ಕೆಎಂ 23 ಸ್ಥಾನ ಗೆದ್ದಿದೆ. ಒಂದು ಕಡೆ ಎಸ್ಡಿಎಫ್ ಜಯ ಸಾಧಿಸಿದೆ. ಉಳಿದಿರುವ 8 ಕ್ಷೇತ್ರಗಳಲ್ಲಿ ಎಸ್ಕೆಎಂ ಮುನ್ನಡೆ ಕಾಯ್ದುಕೊಂಡಿದೆ.