ಅರಂಬೂರು:ಆಲೆಟ್ಟಿ ಗ್ರಾಮದ ಅರಂಬೂರು ಸೇತುವೆ ಬಳಿ ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರರ ದಾಳಿಯನ್ನು ಖಂಡಿಸಿ, ದಾಳಿಯಿಂದ ಮಡಿದವರಿಗೆ ಮೊಂಬತ್ತಿ ಉರಿಸುವ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಉಗ್ರಗಾಮಿಗಳ ದಾಳಿಯನ್ನು
ಖಂಡಿಸಿ ಪ್ರಮುಖರಾದ ಬಾಪೂಸಾಹೇಬ್ ಅರಂಬೂರು, ಎಂ.ವೆಂಕಪ್ಪ ಗೌಡ, ಕೆ. ಗೋಕುಲದಾಸ್ ಸುಳ್ಯ, ಧರ್ಮಪಾಲ ಕೊಯಿಂಗಾಜೆ ಮಾತನಾಡಿದರು. ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ, ಅಮ್ಮು ರೈ ಅರಂಬೂರು, ರತ್ನಾಕರ ರೈ ತವಿದ್ ಅರಂಬೂರು, ನಾರಾಯಣ ರೈ ಅರಂಬೂರು, ಮೀನಾಕ್ಷಿ, ಜಯಲತ, ಜತ್ತಪ್ಪ ರೈ, ಕುಕ್ಕಪ್ಪ ರೈ, ದಿವಾಕರ ಪೈ, ಭವಾನಿಶಂಕರ ಶಂಕರ ಕಲ್ಮಡ್ಕ, ಬಶೀರ್ ಸಾಹೇಬ್ ಅರಂಬೂರು, ಬಾಷಾ ಸಾಹೇಬ್, ಮಂಜುನಾಥ ಪೈ, ಪಹಿಮ್ , ಅಬ್ದುಲ್ಲ, ಮತ್ತಿತರರು ಉಪಸ್ಥಿತರಿದ್ದರು.