ಸುಳ್ಯ: ಉಪನ್ಯಾಸಕಿ ಲೇಖಕಿ ಸುಳ್ಯದ ಡಾ.ಅನುರಾಧಾ ಕುರುಂಜಿಯವರಿಗೆ
ಕರ್ನಾಟಕ ರಾಜ್ಯ ವೈಜ್ಞಾನಿಕ ಪರಿಷತ್ತು ಅತ್ಯುತ್ತಮ ಸಾಧನೆಗೈದ ಮಹಿಳೆಯರಿಗೆ ನೀಡುವ ರಾಜ್ಯಮಟ್ಟದ ‘ಚೈತನ್ಯ ಶ್ರೀ- 2024 ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಉಪನ್ಯಾಸಕಿಯಾದ ಡಾ. ಅನುರಾಧಾ ಕುರುಂಜಿ ವ್ಯಕ್ತಿತ್ವ ವಿಕಸನ ತರಬೇತುದಾರರು ಹಾಗೂ
ಸಂಘಟಕಿಯಾಗಿದ್ದಾರೆ.ಬೆಂಗಳೂರಿನ ಯಲಹಂಕದ ವಿ ಜೆ ಇಂಟರ್ ನ್ಯಾಷನಲ್ ಶಾಲಾ ಮೈದಾನದಲ್ಲಿ ಡಿ. 28 ಮತ್ತು 29 ರಂದು ನಡೆಯಲಿರುವ ರಾಜ್ಯ ಮಟ್ಟದ ನಾಲ್ಕನೇ ವೈಜ್ಞಾನಿಕ ಸಮ್ಮೇಳನದಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ಕುರುಂಜಿಯ ಪದ್ಮಯ್ಯ ಗೌಡ, ಸೀತಮ್ಮ ದಂಪತಿಗಳ ಪುತ್ರಿ ಹಾಗೂ ಕೆವಿಜಿ ಪಾಲಿಟೆತ್ನಿಕ್ ನ ಶಿಕ್ಷಕ ಚಂದ್ರಶೇಖರ ಬಿಳಿನೆಲೆಯವರ ಪತ್ನಿ.