ಸುಳ್ಯ:ಸುಳ್ಯ ರೋಟರಿ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ರಥಬೀದಿಯ ರೋಟರಿ ಸಮುದಾಯ ಸಭಾಭವನದಲ್ಲಿ ನಡೆಯಿತು.2024-25ರ ಸಾಲಿನ ರೋಟರಿ ಕ್ಲಬ್ನ ನೂತನ ಅಧ್ಯಕ್ಷೆ ಯೋಗಿತಾ ಗೋಪಿನಾಥ್, ಕಾರ್ಯದರ್ಶಿ ಡಾ.ಹರ್ಷಿತಾ ಪುರುಷೋತ್ತಮ, ಕೋಶಾಧಿಕಾರಿ ಹರಿರಾಯ ಕಾಮತ್ ನೇತೃತ್ವದ ತಂಡ ಅಧಿಕಾರ ವಹಿಸಿಕೊಂಡರು. ರೋಟರಿ ಕ್ಲಬ್ನ
ನಿರ್ಗಮನ ಅಧ್ಯಕ್ಷ ಆನಂದ ಖಂಡಿಗ ಅಧಿಕಾರ ಹಸ್ತಾಂತರ ಮಾಡಿದರು.ರೋಟರಿ ಕ್ಲಬ್ ಪುತ್ತೂರು ಇದರ ಅಧ್ಯಕ್ಷರಾದ ಡಾ.ಶ್ರೀಪತಿ ರಾವ್ ಪದಗ್ರಹಣ ನೆರವೇರಿಸಿ ಮಾತನಾಡಿ
‘ಯೋಗಿತ ಗೋಪಿನಾಥ್ ತಂಡ ಅತ್ಯುತ್ತಮವಾಗಿ ಕೆಲಸ ಮಾಡಿ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು.
ಮುಖ್ಯ ಅತಿಥಿಯಾಗಿದ್ದ ಝೋನ್ 7ರ ಎಆರ್ಆರ್ಎಫ್ಸಿ ಕೆ.ಕೃಷ್ಣ ಶೆಟ್ಟಿ ಮಾತನಾಡಿ’ ರೋಟರಿಯ ಧ್ಯೇಯೋದ್ದೇಶವನ್ನು ಅರಿತು ಅತ್ಯುತ್ತಮ ಕೆಲಸ ಮಾಡಿ ರೋಟರಿ ಕ್ಲಬ್ನ ನೂತನ ತಂಡ ಸಾಧನೆಯ ಉತ್ತುಂಗ ಶಿಖರವನ್ನು ಏರಲಿ ಎಂದು ಹಾರೈಸಿದರು.
ನೂತನ ಅಧ್ಯಕ್ಷೆ ಯೋಗಿತ ಗೋಪಿನಾಥ್ ಮಾತನಾಡಿ ‘2024-25 ರ ಸಾಲಿನಲ್ಲಿ ಅಧ್ಯಕ್ಷೆಯಾಗಿ ನೂತನ ತಂಡದೊಂದಿಗೆ ಸಮಾಜಕ್ಕೆ ಮನಮುಟ್ಟುವ ಮತ್ತು ಸಮಾಜದ ವಿವಿಧ ಸ್ತರಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ಅಂತಾರಾಷ್ಟ್ರೀಯ ರೋಟರಿ ಧೈಯವಾಕ್ಯ ‘ದಿ ಮ್ಯಾಜಿಕ್ ಆಫ್ ರೋಟರಿ’ ಎಂಬ ಧೈಯ ವಾಕ್ಯದಡಿಯಲ್ಲಿ ವಿವಿಧ
ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ರಸ್ತೆ ಸುರಕ್ಷತಾ ಜಾಗೃತಿ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮ, ಶುದ್ಧ ಕುಡಿಯುವ ನೀರಿನ ನಿರ್ವಹಣೆ,ಮಾನಸಿಕ ಆರೋಗ್ಯ ಕಾರ್ಯಕ್ರಮಗಳು,ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳಿಗೆ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಝೋನ್ 5ರ ಅಸಿಸ್ಟೆಂಟ್ ಗವರ್ನರ್ ವಿನಯಕುಮಾರ್, ಝೋನಲ್ ಲೆಪ್ಟಿನೆಂಟ್ ಪ್ರಭಾಕರನ್ ನಾಯರ್. ಕೆ ಅತಿಥಿಗಳಾಗಿದ್ದರು.
ನಿರ್ಗಮನ ಅಧ್ಯಕ್ಷ ಆನಂದ ಖಂಡಿಗ ಹಾಗೂ ಕಾರ್ಯದರ್ಶಿ ಕಸ್ತೂರಿ ಶಂಕರ್ ಅವರನ್ನು ಸನ್ಮಾನಿಸಲಾಯಿತು. ವಿಶಿಷ್ಠ ಸಾಧನೆಗಾಗಿ ರೋಟರಿಯ ಹಿರಿಯ ಸದಸ್ಯರಾದ ಸೀತಾರಾಮ ರೈ ಸವಣೂರು, ರಾಮಚಂದ್ರ ಪಿ. ಅವರನ್ನು ಸನ್ಮಾನಿಸಲಾಯಿತು.
ಅಡ್ಕಾರ್ ಹಾಗೂ ಜ್ಯೋತಿಯ ಅಂಗನವಾಡಿಗಳಿಗೆ ಪ್ರಾಜೆಕ್ಟ್ ಯೋಜನೆಯ ಸವಲತ್ತು ಹಸ್ತಾಂತರ ಮಾಡಲಾಯಿತು.
ಡಿಸ್ಟ್ರಿಕ್ ಪ್ರಾಜೆಕ್ಟ್ ಪಾಸಿಟಿವ್ ಹೆಲ್ತ್ನಲ್ಲಿ ಪಾರ್ಶ್ವವಾಯು ಪೀಡಿತ ಮಹಿಳೆಗೆ ವೀಲ್ ಚೆಯರ್ ಹಸ್ತಾಂತರ ಮಾಡಲಾಯಿತು. ತಾಲೂಕಿನಲ್ಲಿ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ರೋಟರಿ ನಿರ್ಗಮನ ಅಧ್ಯಕ್ಷ ಆನಂದ ಖಂಡಿಗ ಸ್ವಾಗತಿಸಿ, ನೂತನ ಕಾರ್ಯದರ್ಶಿ ಡಾ.ಹರ್ಷಿತಾ ಪುರುಷೋತ್ತಮ ವಂದಿಸಿದರು. ದಳ ಸುಬ್ರಾಯ ಭಟ್ ಕಾರ್ಯಕ್ರಮ ನಿರೂಪಿಸಿದರು.