ಸುಳ್ಯ:ಸಂಪೂರ್ಣ ಹದಗೆಟ್ಟಿರುವ ಅಂತಾರಾಜ್ಯ ರಸ್ತೆ ಆಲೆಟ್ಟಿ-ಬಡ್ಡಡ್ಕ ಜಿಲ್ಲಾ ಮುಖ್ಯ ರಸ್ತೆಯ ನಿರ್ವಹಣೆಗೆ 18.98 ಲಕ್ಷ ಅನುಮೋದನೆಯಾಗಿ ಗುತ್ತಿಗೆ ಕರಾರು ಆಗಿದೆ ಎಂದು ಲೋಕೋಪಯೋಗಿ ಇಲಾಖೆ ಮಾಹಿತಿ ನೀಡಿದೆ. ಮೇ.13ರಂದು ನಡೆದ ಸುಳ್ಯ ತಾಲೂಕು ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ
ಇಲಾಖಾ ಇಂಜಿನಿಯರ್ ನೀಡಿದ ಪಾಲನಾ ವರದಿಯಲ್ಲಿ ತಿಳಿಸಲಾಗಿದೆ. ಕಾಮಗಾರಿಯ ಕುರಿತು ರಾಮ್ಕೋ ಗ್ಲೋಬಲ್ ಕಂಪೆನಿಗೆ ಗುತ್ತಿಗೆ ಕರಾರು ಮಾಡಿಕೊಂಡು ಕೆಲಸ ನಿರ್ವಹಿಸಲು ವಿಭಾಗ ಕಚೇರಿಯಿಂದ ಪತ್ರ ಬರೆಯಲಾಗಿದೆ ಎಂದು ಲೋಕೊಪಯೋಗಿ ಇಂಜಿನಿಯರ್ ಸಭೆಗೆ ನೀಡಿದ ವರದಿಯಲ್ಲಿ ತಿಳಿಸಲಾಗಿದೆ.
ಆಲೆಟ್ಟಿ-ಬಡ್ಡಡ್ಕ ರಸ್ತೆಯ ನಾಗಪಟ್ಟಣ ಸೇತುವೆಯ ದುರಸ್ತಿ ಕಾರ್ಯ ನಡೆಯುತ್ತಿದ್ದು ಬೇರಿಂಗ್ ಅಳವಡಿಸಬೇಕಾಗಿದೆ. ಬೇರಿಂಗ್ಗೆ ಆರ್ಡರ್ ನೀಡಲಾಗಿದ್ದು ಬೇರಿಂಗ್ ಬಂದ ಕೂಡಲೇ ದುರಸ್ತಿ ಕಾರ್ಯ ನಡೆಸಲಾಗುವುದು ಎಂದು ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ತಿಳಿಸಿದರು.













