ಮೈಸೂರು:ಖ್ಯಾತ ಭರತನಾಟ್ಯ ಕಲಾವಿದೆ ಡಾ.ಚೇತನಾ ರಾಧಾಕೃಷ್ಣ ಮತ್ತು ಖ್ಯಾತ ಚಲನಚಿತ್ರ ತಾರೆ ಹಾಗು ಭರತನಾಟ್ಯಂ ಕಲಾವಿದೆ ಪಾಯಲ್ ರಾಧಾಕೃಷ್ಣ ನೇತೃತ್ವದಲ್ಲಿ ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ವಿಶ್ವ ವಿಖ್ಯಾತ ಮೈಸೂರು ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ನಡೆದ ನೃತ್ಯ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.ಮಂಡ್ಯ ಮತ್ತು
ಮೈಸೂರು ಜಿಲ್ಲೆಗಳಲ್ಲಿ ಶಾಸ್ತ್ರೀಯ ನೃತ್ಯ ಕಲೆಯಲ್ಲಿ ಪ್ರಸಿದ್ಧಿ ಪಡೆದಿರುವ ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ ವತಿಯಿಂದ ಮೈಸೂರು ಅರಮನೆ ಮುಂಭಾಗದ ಭವ್ಯ ಸಾಂಸ್ಕೃತಿಕ ವೇದಿಕೆಯಲ್ಲಿ
ಡಾ.ಚೇತನಾ ರಾಧಾಕೃಷ್ಣ ಮತ್ತು ಪಾಯಲ್ ರಾಧಾಕೃಷ್ಣ ನೇತೃತ್ವದಲ್ಲಿ ದಶ ‘ವಿದ್ಯಾಬಾಲ ಭರತನಾಟ್ಯಂ’ಪ್ರದರ್ಶನಗೊಂಡಿತು.ಡಾ.ಚೇತನಾ ರಾಧಾಕೃಷ್ಣ ನಿರ್ದೇಶನದಲ್ಲಿ

ಗುರುದೇವ ಅಕಾಡೆಮಿಯ 32ಕ್ಕೂ ಹೆಚ್ಚು ಕಲಾವಿದರು ಸುಮಾರು ಒಂದೂವರೆ ಗಂಟೆಗೂ ಹೆಚ್ಚು ಸಮಯ ನಡೆದ ಭರತನಾಟ್ಯ ಪ್ರದರ್ಶನ ನೀಡಿದರು.ಗೀತ ಪಂಚಾಮೃತ ಭಗವದ್ಗೀತೆಯ ಶ್ಲೋಕಗಳಿಗೆ ಹಾಗೂ ದೇವಿಯ ಕುರಿತಾದ ಪ್ರಸ್ತುತ ಪಡಿಸಿದ ದಶ ವಿದ್ಯಾ ಬಾಲ ರೂಪಕ
ನೋಡುಗರ ಮೆಚ್ಚುಗೆ ಗಳಿಸಿತು.ಬಳಿಕ ದಸರಾ ಸಾಂಸ್ಕೃತಿಕ ವೇದಿಕೆಯಲ್ಲಿ ಕಲಾವಿದರನ್ನು ಗೌರವಿಸಲಾಯಿತು.ಗುರುದೇವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್ನ ವ್ಯವಸ್ಥಾಪಕ ನಿರ್ದೇಶಕರಾದ ಪಿ.ಎಂ.ರಾಧಾಕೃಷ್ಣ ಉಪಸ್ಥಿತರಿದ್ದರು.











